ಶತಕದ ಸೌಧ ಕಟ್ಟಿದ ರೋಹಿತ್, ಜಡೇಜಾ

199

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಪಡೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದೆ. 3ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಆಲ್ ರೌಂಡರ್ ಜಡೇಜಾ ಶತಕದ ಸೌಧ ಕಟ್ಟಿದ್ದಾರೆ. ಈ ಮೂಲಕ ಆಂಗ್ಲರ ಬೌಲಿಂಗ್ ದಾಳಿಗೆ ಉತ್ತರಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾಗೆ ಯುವ ಆಟಗಾರರಾದ ಜೈಸ್ವಾಲ್ 10, ಶುಭನಂ ಗಿಲ್ 0. ರಜತ್ ಪತಿದಾರ್ 5 ರನ್ ಗಳಿಸಿ ಔಟ್ ಆಗುವ ಮೂಲಕ ಟೆನ್ಷನ್ ನೀಡಿದರು. ಒಂದು ವಿಕೆಟ್ ಬೀಳುತ್ತಿದ್ದರು, ಮತ್ತೊಂದು ಗಟ್ಟಿಯಾಗಿ ನಿಂತ ನಾಯಕ ಶರ್ಮಾ ಭರ್ಜರಿ 131 ರನ್ ಗಳಿಸಿದರು. ನಾಯಕನಿಗೆ ಸಾಥ್ ನೀಡಿದ ಆಲ್ ರೌಂಡರ್ ಜಡೇಜಾ ಸಹ ಶತಕ ಸಿಡಿಸಿದರು.

4ನೇ ವಿಕೆಟ್ ಜೊತೆಯಾಟದಲ್ಲಿ ಶರ್ಮಾ-ಜಡೇಜಾ ಜೋಡಿ 204 ರನ್ ಗಳು ಬಂದವು. ರೋಹಿತ್ ಔಟ್ ಆದಾಗ ಭಾರತ 237 ರನ್ ಗಳಿಸಿತ್ತು. ನಂತರ ಬಂದ ಸರ್ಫರಾಜ್ ಖಾನ್ 62 ರನ್ ಗಳಿಸುವ ಮೂಲಕ ಸಿಕ್ಕ ಅವಕಾಶ ಯಶಸ್ವಿಯಾಗಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಜಡೇಜಾ ಅಜೇಯ 110, ಕುಲ್ದೀಪ್ ಯಾದವ್ ಅಜೇಯ 1 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.

ಇಂಗ್ಲೆಂಡ್ ಮಾರ್ಕ್ ವುಡ್ 3 ವಿಕೆಟ್ ಪಡೆದಿದ್ದು ಮಾತ್ರವಲ್ಲದೆ 1 ರನ್ ಔಟ್ ಮಾಡಿ ಮಿಂಚಿದರು. ಟಾಮ್ ಹರ್ಟಲ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!