ಸಿದ್ದಣ್ಣ ಹಿರೇಕುರುಬರ ಎಪಿಎಂಸಿ ನೂತನ ಅಧ್ಯಕ್ಷ

356

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಸಿದ್ದಣ್ಣ ಹಿರೇಕುರುಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡು ಬಾರಿ ಎಪಿಎಂಸಿ ಅಧ್ಯಕ್ಷ ಗಾದಿ ಏರಿದ್ದಾರೆ. ಗೊಲ್ಲಾಳಪ್ಪ ರೂಗಿ ಅವರ 10 ತಿಂಗಳ ಅವಧಿ ಮುಗಿದಿದ್ದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆದರೆ, ಸಿದ್ದಣ್ಣ ಹಿರೇಕುರುಬರ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸದೆ ಇರುವುದ್ರಿಂದ ಅವಿರೋಧವಾಗಿ ಆಯ್ಕೆಯಾದರು.

ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಚುನಾವಣಾಧಿಕಾರಿಯಾದ ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಸರ್ವ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಸಿದ್ದಣ್ಣ ಹಿರೇಕುರುಬರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದ್ರು. ಈ ವೇಳೆ ಹಂಗಾಮಿ ಅಧ್ಯಕ್ಷರಾಗಿದ್ದ ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ ಉಪಸ್ಥಿತರಿದ್ರು.

ಈ ವೇಳೆ ಮಾತ್ನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಕೊಟ್ಟ ಮಾತಿನಂತೆ ಗೊಲ್ಲಾಳಪ್ಪಗೌಡ ರೂಗಿ ಅವರು 10 ತಿಂಗಳ ಬಳಿಕ ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಕ್ಕೆ, ಸಿದ್ದಣ್ಣ ಹಿರೇಕುರುಬರ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲ ಸದಸ್ಯರಿಗೆ, ನಾಯಕರಿಗೆ ಧನ್ಯವಾದಗಳು ಎಂದರು.

ಸಿಂದಗಿ ಹಾಗೂ ದೇವರಹಿಪ್ಪರಗಿ ಒಳಗೊಂಡಂತೆ 16 ಜನ ಸದಸ್ಯರನ್ನ ಎಪಿಎಂಸಿ ಹೊಂದಿದೆ. ಈಗ ಉಳಿದಿರುವ 5 ತಿಂಗಳ ಅವಧಿಗೆ ಸಿದ್ದಣ್ಣ ಹಿರೇಕುರುಬರ ಅಧ್ಯಕ್ಷರಾಗಿರಲಿದ್ದಾರೆ.

ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಮಾಜಿ ಶಾಸಕರ ಶರಣಪ್ಪ ಸುಣಗಾರ, ಸಿಂದಗಿ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಗೊಲ್ಲಳಾಪ್ಪಗೌಡ ರೂಗಿ, ಸದಸ್ಯರಾದ ಕೆಂಚಪ್ಪ ಕತ್ನಳ್ಳಿ, ವಿಠ್ಠಲ ಅಣ್ಣಪ್ಪ, ಶಾಂತವೀರ ಬಿರಾದಾರ, ಪರಶುರಾಮ ಕೊಟರಗಸ್ತಿ, ಇಮಾಮಸಾಬ್ ನಧಾಪ್, ಗಾಯಿತ್ರಿ ದೇವೂರ, ಉಮೇಶ ಜೋಗೂರ, ಶಂಕರಲಿಂಗಯ್ಯ ಹಿರೇಮಠ, ಸಂತೋಷ ಹರನಾಳ, ಹಳ್ಳೆಪ್ಪಗೌಡ ಚೌಧರಿ, ನರಸಿಂಗ್ ಪ್ರಸಾದ್ ತಿವಾರಿ, ಮುಸ್ತಾಕ್ ಮುಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!