ಮತ್ತೆ ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವರು..

253

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಈ ಘಟನೆಗೆ ರಾಜ್ಯದ್ಯಾಂತ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಸೇರಿದಂತೆ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಪ್ರತಿಭಟನೆಗಳು ಸಹ ನಡೆಯುತ್ತಿವೆ.

ಇದರ ನಡುವೆ ಗೃಹ ಸಚಿವರು ಮತ್ತೆ ಬೇಜವಾಬ್ದಾರಿಯುತ ಹೇಳಿಕೆಯನ್ನ ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾತ್ನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, 7.30ರ ಸುಮಾರಿಗೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಮೊದಲೇ ಅಲ್ಲಿಗೆ ಹೋಗಬಾರದಿತ್ತು. ಈ ಘಟನೆ ನಡೆದಿದ್ದು ಅಲ್ಲಿ. ಕಾಂಗ್ರೆಸ್ ನವರು ನನ್ನನ್ನ ರೇಪ್ ಮಾಡುವ ಪ್ರಯತ್ನ ನಡೆಸಿದ್ದಾರೆ. ಗೃಹ ಸಚಿವರನ್ನ ರೇಪ್ ಮಾಡುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ.

ಇನ್ನು ಆಗಸ್ಟ್ 18ರಂದು ಬಿಜೆಪಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಯಾದಗಿರಿಗೆ ಬಂದ ಸಂದರ್ಭದಲ್ಲಿ, ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ರು. ಇದನ್ನ ಸಹ ಸಮರ್ಥಿಸಿಕೊಂಡ ಗೃಹ ಸಚಿವರು, ಮಲೆನಾಡಿನ ಭಾಗದಲ್ಲಿ ಖುಷಿಯಾದಾಗ, ಹಬ್ಬದ ವೇಳೆ ಗುಂಡು ಹಾರಿಸುತ್ತಾರೆ. ಹಾಗೇ ಖುಷಿಯಿಂದ ಹಾರಿಸಿದ್ದಾರೆ ಎಂದು ಹೇಳಿದ್ರು. ನೂರಾರು ಜನರು ಸೇರಿದ ಜಾಗದಲ್ಲಿ ಹೀಗೆ ಅಸುರಕ್ಷಿತವಾಗಿ ಬಂದೂಕು ಹಿಡಿದುಕೊಂಡು ಗುಂಡು ಹಾರಿಸಿದ್ದಾರೆ. ಒಂದು ವೇಳೆ ಏನಾದ್ರೂ ಅನಾಹುತವಾಗಿದ್ರೆ ಯಾರು ಹೊಣೆ ಅನ್ನೋ ಪ್ರಶ್ನೆಯನ್ನ ಜನರು ಅಂದೇ ಕೇಳಿದ್ರು.

ಈಗ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿಯೂ ಬೇಜವಾಬ್ದಾರಿಯುತ ಹೇಳಿಕೆಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನೀಡಿದ್ದಾರೆ. ಹಾಗಾದ್ರೆ, ಇವರಲ್ಲಿ ರಾಜ್ಯವನ್ನ ಸುರಕ್ಷತೆಯಿಂದ ನೋಡಿಕೊಳ್ಳುವ ಶಕ್ತಿ ಇಲ್ಲ. ಇದೊಂದು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!