500 ವಿಕೆಟ್ ಗಳ ಸಾಧನೆ ಮಾಡಿದ ಅಶ್ವಿನ್

187

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾಕ್ ಕ್ರವ್ಲಿ ವಿಕೆಟ್ ಪಡೆಯುವ ಮೂಲಕ 500 ವಿಕೆಟ್ ಗಳ ಮೈಲುಗಲ್ಲು ತಲುಪಿದರು. ಇದರೊಂದಿಗೆ 500 ವಿಕೆಟ್ ಗಳ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರರಾದರು.

ಈ ಸಾಧನೆ ಮಾಡಲು ಅಶ್ವಿನ್ 98 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್ ಕೇವಲ 87 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ಅನಿಲ್ ಕುಂಬ್ಳೆ 105, ಆಸ್ಟ್ರೇಲಿಯಾದ ಆಟಗಾರರದ ವಾರ್ನ್ 108, ಗ್ಲೇನ್ ಮೆಗ್ಗಾರ್ಥ್ 110 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ಅಶ್ವಿನ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ಆಡುವ ಮೂಲಕ ರೆಡ್ ಬೌಲ್ ಹಿಡಿದರು. ಎರಡೂ ಇನ್ನಿಂಗ್ ನಿಂದ 9 ವಿಕೆಟ್ ಪಡೆದಿದ್ದು ಗರಿಷ್ಠ ದಾಖಲೆಯಾಗಿದೆ. 34 ಬಾರಿ 5 ವಿಕೆಟ್ ಪಡೆದಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದೆ. ಬೆನ್ ಡಕೆಟ್ 133 ರನ್ ಗಳಿಂದ ಆಟ ಮುಂದುವರೆಸಿದ್ದಾರೆ. ಜೋ ರೂಟ್ 9 ರನ್ ಗಳೊಂದಿಗೆ ಸಾಥ್ ನೀಡಿದ್ದಾರೆ. ಮಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!