ಭಾರತ ಗೆಲುವಿಗೆ 152 ರನ್ ಗುರಿ

134

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರಾಂಚಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಹತ್ತಿರ ಬಂದಿದೆ. ಸ್ಪಿನ್ನರ್ ದಾಳಿಗೆ ನಲುಗಿದ ಇಂಗ್ಲೆಂಡ್ ಪಡೆ ಕೇವಲ 145 ರನ್ ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಭಾರತಕ್ಕೆ 192 ರನ್ ಗಳ ಗುರಿ ನೀಡಿದೆ.

3ನೇ ದಿನದ ಆಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಗೆಲುವಿಗೆ ಇನ್ನು 152 ರನ್ ಬೇಕಿದೆ. ಜಾಕ್ ಕಾರ್ವಲಿ 60 ರನ್, ಜಾನಿ ಬ್ರಿಸ್ಟೊ 30 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು.

ಭಾರತ ಪರ ಯಶ್ವಿನ 5, ಕುಲದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು. ಜಡೇಜಾ 1 ವಿಕೆಟ್ ಪಡೆದು ಸಾಥ್ ನೀಡಿದರು. ಭಾರತ 2ನೇ ಇನ್ನಿಂಗ್ಸ್ ಆಡುತ್ತಿದ್ದು ನಾಯಕ ರೋಹಿತ್ ಶರ್ಮಾ 24, ಯಶಸ್ವಿ ಜೈಸ್ವಾಲ್ 16 ರನ್ ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಈಗಾಗ್ಲೇ ಆಡಿರುವ 3 ಪಂದ್ಯಗಳಲ್ಲಿ 2-1ರಿಂದ ಭಾರತ ಮುಂದಿದೆ. ಈ ಪಂದ್ಯ ಗೆದ್ದರೆ 1 ಪಂದ್ಯಕ್ಕೂ ಮೊದಲೇ ಸರಣಿ ಕೈ ವಶವಾಗಲಿದೆ.




Leave a Reply

Your email address will not be published. Required fields are marked *

error: Content is protected !!