ಬಜೆಟ್ ಬಗ್ಗೆ ವಿಪಕ್ಷ ನಾಯಕರು ಹೇಳಿದ್ದೇನು?

97

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜನರ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ. ರೈತರು ಸಾಲ ಮನ್ನಾ ಆಗುತ್ತೆ ಎಂದು ಆಸೆ ಇಟ್ಟುಕೊಂಡಿದ್ದರು. ಹೋದ ಸಲ ದಲಿತರ 11 ಸಾವಿರ ಕೋಟಿ ಲಪಟಾಯಿಸಿದ್ದರು. ಅದು ವಾಪಸ್ ಇಲ್ಲ. ಯುವಕರಿಗೆ ಏನಿಲ್ಲ. ನೇಕಾರರ ಪ್ರಸ್ತಾಪವೇ ಇಲ್ಲ. ಪಾಪರ್ ಆಗಿರುವ ಸರ್ಕಾರ ಏನು ಮಾಡುತ್ತೆ. ಕರ್ನಾಟಕದ ಬಜೆಟ್ ದಿವಾಳಿ ಮಾಡಿದ್ದಾರೆ. ಏನಿಲ್ಲ ಏನಿಲ್ಲ ಬೆಂಗಳೂರಿಗೆ ಏನಿಲ್ಲ. ದಲಿತರಿಗೆ ಏನಿಲ್ಲ. ರೈತರಿಗೆ ಏನಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಈ ಬಜೆಟ್ ನಲ್ಲಿ ಏನಿಲ್ಲ. ಇದು ಅಮೃತವಲ್ಲ ವಿಷ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ನಿಂದನೆ, ಸುಳ್ಳುಗಳನ್ನು ಹೇಳಿಸಿದ್ದಾರೆ. ಅದನ್ನು ಬಜೆಟ್ ನಲ್ಲೂ ಮುಂದುವರೆಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಅವರು ಹೇಳಿದಂತೆ ನೂರು ಸುಳ್ಳು ಹೇಳಿ ಸತ್ಯ ಎಂದು ಹೇಳುವುದು ಅಂತಾ ಹೇಳಿದರು.

ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಕೇಂದ್ರದ ಟೀಕೆ, ರಾಜ್ಯದ ಅಭಿವೃದ್ಧಿ ಪೂರಕ ಬಜೆಟ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ. ನೇಕಾರರ ಬಗ್ಗೆ ಇಲ್ಲ, ಅಂಗನವಾಡಿ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಳ ಮಾಡಿಲ್ಲ. ರಾಜ್ಯವನ್ನು 20 ವರ್ಷಕ್ಕೆ ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಎಂದು ಹೇಳಿದರು.

ಇನ್ನು ಬಜೆಟ್ ಅಧಿವೇಶನ ವಿರೋಧಿಸಿ ಬಿಜೆಪಿ, ಜೆಡಿಎಸ್ ಶಾಸಕರು ಸಭಾತ್ಯಾಗ ಮಾಡಿದರು. ಅಲ್ಲದೆ ಪ್ರತಿಭಟನೆ ಮಾಡುವ ಮೂಲಕ ಬಜೆಟ್ ವಿರೋಧಿಸಿದರು.




Leave a Reply

Your email address will not be published. Required fields are marked *

error: Content is protected !!