ಬಿಜೆಪಿ ಬ್ಯಾನರ್ ನಲ್ಲಿ ಜಾರಕಿಹೊಳಿ ಫೋಟೋ

517

ಬೆಳಗಾವಿ : ಬಿಜೆಪಿ ಬ್ಯಾನರ್ ನಲ್ಲಿ ಕಾಂಗ್ರೆಸ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಫೋಟೋ ಕಾಣಿಸಿಕೊಂಡಿದೆ. ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ, ಅವರ ಬ್ಯಾನರ್ ನಲ್ಲಿ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಫೋಟೋ ಕಾಣಿಸಿಕೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿರುವ ಬಿಜೆಪಿ ಅಭ್ಯರ್ಥಿಗಳು ತಂತಮ್ಮ ಕ್ಷೇತ್ರಗಳಲ್ಲಿ ಬ್ಯಾನರ್ ಮೂಲಕ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಳವಡಿಸಿರುವ ಬ್ಯಾನರ್ ನಲ್ಲಿ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಫೋಟೋ ಮಿಂಚುತ್ತಿದೆ. ಇದು ಬೆಳಗಾವಿ ರಾಜಕಾರಣ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿದೆ.

ಇದರ ನಡುವೆ ಕನ್ನಡದಲ್ಲಿ ಬ್ಯಾನರ್ ಇಲ್ಲದ ಕಾರಣ, ಸ್ಥಳೀಯರು ಗರಂ ಆಗಿದ್ದಾರೆ. ಕರ್ನಾಟಕದಲ್ಲಿಯೇ ಕನ್ನಡ ಬ್ಯಾನರ್ ಇಲ್ಲದೇ ಇರೋದು ದುರಂತ ಅಂತಿದ್ದಾರೆ ಸಾರ್ವಜನಿಕರು.




Leave a Reply

Your email address will not be published. Required fields are marked *

error: Content is protected !!