ಬೇಸಿಗೆ ಬೇಗುದಿ

666

ನೆಲ ಕಾದು ಕೆಂಪಾಗಿ ಉರಿಯುತ್ತಿದೆ
ಧರೆಯ ಕಿಚ್ಚು ಮುಗಿಲು ಮುಟ್ಟಿದೆ
ಹಕ್ಕಿಗಳ ಪ್ರೀತಿ ಪ್ರಯಣ ಏನಾಲ್ಲಾ ಸದ್ದುವಿಲ್ಲದೆ ಮಾಯಾವಾಗಿದೆ
ಮಾಂಸಖಂಡವ ಕಚ್ಚಿದಂತೆ
ಕಾದಾಡಿ ಹಸಿವಿನ ಹೊಟ್ಟೆಯೊಳಗೆ
ಜಗಳಕ್ಕೆ ನಿಂತಿವೆ ಗಿಳಿಯಂತೆ ಗುಬ್ಬಿಯಂತೆ
ಪರಿವಾಳವಂತೆ ಬಂದವು ಹಿಂಡು ಹಿಂಡು ದೊಡ್ಡ ದಂಡು
ಹಸಿದ ಭೂಮಿಯು ಕಂಡು ಕಣ್ಣೀರು ಸುರಿಸಿದವು.
ದಿಕ್ಕು ದಿಕ್ಕುಗಳಲ್ಲಿ ಬಿಸಿಲಿನ ಕೆಂಪಾದ ಬೆಳಕು ಕತ್ತಿಯು ಹರಿದು
ಮುಗಿಲನ್ನು ಒಮ್ಮೆಲೇ ಸೀಳುವಂತೆ
ಕರಗುತ್ತಲಿದೆ ಕೆರೆಯ ಸಂಪತ್ತು ಇಂಚಿಂಚು
ಲೋಕವೇ ಶಪಿಸುತಿದೆ ಮಳೆಗಾಗಿ
ನಗುವು ಸತ್ತು ಶೋಕವೇ ನರ್ತಿಸುತ್ತಿದೆ
ವನದ ಹಕ್ಕಿಗಳೆಲ್ಲ ಕಿಚಕಿಚನೆ ಅರಚಿ
ನೀರೆ ನೀರು ಹಕ್ಕಿಗಳ ಕಣ್ಣೊಳಗೆ.
ಹುಲ್ಲು ಮೇಯುವ ದನಗಳು ಬಾಯ್ದೆರೆದು ಕೂಗುತಿವೆ
ಉಸಿರಿಲ್ಲದ ದನಗಳಿಗೆ ಸಂತೆಯಲ್ಲಿ ಮಾರಿ
ತೊಗಲು ಸುಲಿದರು ನಡು ಬೀದಿಯಲಿ
ನಡುಮಧ್ಯಾಹ್ನ ಉರಿಬಿಸಿಲಿನೊಳು ಮಾರುವರು.

ನದಿಗಳ ದಂಡಿಯಲ್ಲಿ ನಿದ್ರೆಸುವ ಪಕ್ಷಿಗಳು ನದಿಯ
ಕಾವಿಗೆ ಹಾರಿ ಹೋದವು
ಬತ್ತಿದ ಹೊಳೆಯೊಳಗೆ ಖಾಲಿ ದೋಣಿಗಳು ಮಲಗಿವೆ
ಮೇಲೆ ಆಕಾಶದ ಕಾವು
ಕೆಳಗೆ ನೆಲದ ಕಾವು
ಎರಡು ಬದಿಯಿಂದ ನಿರಂತರ ಒತ್ತಡ
ಗೋಡೆಗೆ ತಲೆಯಾನಿಸಿ ಬಿಟ್ಟು ಕಣ್ಣು
ಹಸಿದ ಭೂಮಿಯ ಕಂಡು
ಮಳೆಗಾಗಿ ಮುಗಿಲು ನೋಡಿದೆ
ಬೆಚ್ಚಿಬೀಳಿಸುವಷ್ಟು ತೂಗೂವಗಾಳಿ
ಗಾಳಿಗೆ ಗುಬ್ಬಿಯ ಕನಸಿನ ಗೂಡು
ಅದರ ಒಂದೊಂದೇ ಕಡ್ಡಿಗಳು
ಗಾಳಿಯಲ್ಲಿ ಚಲಿಸುತ್ತ ಚಲಿಸುತ್ತ ಕಾಡು ಸೇರಿದವು.

ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ
ಕಣ್ಣೀರು ತುಂಬಿದ ಹಕ್ಕಿ
ಗೂಡಿನ ಹರಕು ನೆರಳಲ್ಲಿ
ಅರೆತೆರದ ಕಣ್ಣುಗಳ ಕಂದನಿಗೆ ಅನ್ನವ ಉಣಿಸಲು ಬಂದಿದ್ದು
ಕಂದನ ಬಾಯ್ತುಂಬ ತುರಕಿ ಕ್ಷಣದಲ್ಲಿ ರೆಕ್ಕೆಯು ಬಡಿದು
ಹಾರಿ ಹೋಯಿತು.
ಹಳ್ಳಿಯೋ ದಿಲ್ಲಿಯೋ
ನೀರು ಲೀಟರಿಗೆ ಇಪ್ಪತ್ತು ರೂಪಾಯಿ
ಆದರೂ ಬಿಯರಿಗಿಂತ ಅಗ್ಗ
ಅಕ್ಕಿಗಿಂತ ದುಬಾರಿ
ಬೇಸಿಗೆಯೊಳು ಹಿಂಡು ಹಿಂಡು ನೀರಿನ ಬಾಟಲಿ
ಮಾರಾಟ ಜನ ಮೃಗದಂತೆ ಹೋರಾಟ.

ಸಂಗಪ್ಪ ತೌಡಿ, ಸಂಶೋಧನಾ ವಿದ್ಯಾರ್ಥಿ, ಕಲಬುರಗಿ

TAG


Leave a Reply

Your email address will not be published. Required fields are marked *

error: Content is protected !!