ಇಂಡಿಯಾದ ಹಾಡೆ…

492

ಚಿಕ್ಕ ಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕವಿ ಹಾಗೂ ವಿಮರ್ಶಕ ಮಹಾಂತೇಶ ಪಾಟೀಲ ಅವರ ಕವಿತೆ ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕೀಯ ಮಿಶ್ರಿತದಿಂದ ಸಮಾಜದಲ್ಲಿ ಆಗ್ತಿರುವ ಪಲ್ಲಟದ ಬಗ್ಗೆ ಪ್ರಶ್ನೆ ಮಾಡುತ್ತಾ ಹೋಗುತ್ತೆ…

ಹುಚ್ಚರ ಲೋಕದಲ್ಲಿ

ಸಂತನಾಗುವುದು ಅಪರಾಧ ಎನ್ನುವುದಾದರೆ,

ನಮಗಾಗಿ ಒಂದಿಷ್ಟು ಬಂಧಿಖಾನೆಗಳ ಖಾತ್ರಿಪಡಿಸಿ

ದಡ್ಡರೆ ದೊರೆಗಳಾದ ದೇಶದಲ್ಲಿ

ಸಂವಿಧಾನ ಸಿಲುಬೆ ಎನ್ನುವುದಾದರೆ,

ಪ್ರೇಮದ ಪ್ರಾರ್ಥನೆಗೊಂದಿಷ್ಟು ಜಾಗ ಗುರುತಿಸಿ

ಮೂರ್ಖರ ಮಹಾಕಾವ್ಯವನ್ನು

ಧರ್ಮ ಎನ್ನುವುದಾದರೆ

ಪಾಪದ ನದಿಯಲ್ಲಿ ಪುಣ್ಯದ ಪಿಂಡವನ್ನಾದರೂ ತೇಲಿಬಿಡಿ;

ಕಾಗೆಗಳು ಉಪವಾಸ ಕೂತಿವೆ!

ಈಗ ಎಲ್ಲಾ ಜಂತುಗಳು

ಸಂತೆಯಲ್ಲಿ ಹೋಲಸೇಲ್ ದರದಲ್ಲಿ ದೊರಕುತ್ತವೆ;

ಒಂದಕ್ಕೆ ಹನ್ನೊಂದು ಉಚಿತ

ಕರಡಿಯ ಎದುರು ಗೂಳಿಯ ಕುಣಿತ

ಈಗ ಕೆಮ್ಮಿದರೂ ಜನ ‘ತಿಂಡಿ’ ಎನ್ನುತ್ತಾರೆ

ನಮಗೆ ರೋಗದ ಬಗ್ಗೆ ಭಯವಿಲ್ಲ

ದವಾಖಾನೆಗಳು ಕಸಾಯಿಖಾನೆಗಳೆಂದು

ಹೆಸರು ಬದಲಾಸುವರೆಂಬ ಭಯ!

‘ನ್ಯಾಯದ ತೊಟ್ಟಿಲಲ್ಲಿ

ನಿದ್ರಿಸುವ ನ್ಯಾಯದ ಬೆಕ್ಕು-

ಮತದಾರನದ್ದು ಮಂಗನ ವೇಷ

ಸಂಸದರು ಬಾವುಗದ ಮೋತಿ

ಓ ಇಂಡಿಯಾ ದೇಶದ ಹಾಡೆ

ಹೆಳವರ ಓಟದಲ್ಲಿ

ಕುರುಡರು ತೀರ್ಪುಗಾರರಾದರೂ ನೋಡೆ!

ಕವಿ ಮಹಾಂತೇಶ ಪಾಟೀಲ

TAG


Leave a Reply

Your email address will not be published. Required fields are marked *

error: Content is protected !!