ಬುದ್ಧನ ಕುರಿತ ಕವಿತೆಗಳಿಗೆ ಆಹ್ವಾನ

965

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ಬುದ್ಧ ಪೂರ್ಣಿಮೆ ಪ್ರಯುಕ್ತ ಮೈಸೂರಿನ ತನುಮನ ಸಂಸ್ಥೆ ಹಾಗೂ ಮಾಧ್ಯಮರಂಗ ಫೌಂಡೇಶನ್, ಸಿಂದಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬುದ್ಧನ ಕುರಿತಾಗಿ ಬರೆದ ಕವಿತೆಗಳಿಗೆ ಆಹ್ವಾನ ನೀಡಲಾಗಿದೆ. ನಾಡಿನ ಯಾವುದೇ ಭಾಗದ ಬರಹಗಾರರು ಸ್ವರಚಿತ ಕವಿತೆಗಳನ್ನು ಕಳುಹಿಸಬಹುದು ಎಂದು ಖ್ಯಾತ ಗಾಯಕ ಲಕ್ಷ್ಮಿರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುದ್ಧನ ಕುರಿತಾದ ಕವಿತೆ 16 ಸಾಲಿನೊಳಗೆ ಇರಬೇಕು. ಏಪ್ರಿಲ್ 15ರೊಳಗೆ ಕಳುಹಿಸಬೇಕು. ಮೇ 5, 2023ರಂದು ನಡೆಯುವ ಕಾರ್ಯಕ್ರಮದಲ್ಲಿ 3 ಕವಿತೆಗಳಿಗೆ ಬಹುಮಾನ ಹಾಗೂ 25 ಕವಿತೆಗಳಿಗೆ ಉತ್ತಮ ಕವಿತೆ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ಕೆ ಆದ ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಕಾರ್ಯಕ್ರಮದಲ್ಲಿ ಗಾಯನದ ಮೂಲಕ ಪ್ರಸ್ತುತಪಡಿಸಲಾಗುತ್ತೆ.

ಬರಹಗಾರರು ತಮ್ಮ ಕವಿತೆಗಳನ್ನು 9901313740 ಈ ನಂಬರ್ ಗೆ ವಾಟ್ಸಪ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿಯೂ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
Leave a Reply

Your email address will not be published. Required fields are marked *

error: Content is protected !!