ವರ್ಲ್ಡ್ ಕಪ್ ನಲ್ಲಿ ಮೊದಲು ಸೆಮಿಫೈನಲ್ ತಲುಪಿದ್ಯಾರು ಗೊತ್ತಾ?

420

ಲಾರ್ಡ್ಸ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿವೆ. ಯಾವ ತಂಡ ಮೊದಲು ಸೆಮಿಫೈನಲ್ ತಲುಪುತ್ತೆ ಅನ್ನೋ ಕುತೂಹಲವಿತ್ತು. ಅದಕ್ಕೆ ಉತ್ತರ ಆಸ್ಟ್ರೇಲಿಯಾ ನೀಡಿದೆ.

ಐದು ಬಾರಿ ವರ್ಲ್ಡ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಟೀಂ, ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ 2019ರ ವರ್ಲ್ಡ್ ಕಪ್ ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.

ಆಸ್ಟ್ರೇಲಿಯಾ ನೀಡಿದ್ದ 286 ರನ್ ಗಳ ಟಾರ್ಗೆಟ್ ಮುಟ್ಟಲು ಆಗದೇ ಇಂಗ್ಲೆಂಡ್ 64 ರನ್ ಗಳಿಂದ ಸೋಲು ಅನುಭವಿಸಿತು. ಇದ್ರಿಂದಾಗಿ ಆಸೀಸ್ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ದಾಖಲಿಸಿ 12 ಪಾಯಿಂಟ್ ಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡು ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.




Leave a Reply

Your email address will not be published. Required fields are marked *

error: Content is protected !!