2 ವರ್ಲ್ಡ್ ಕಪ್.. 4 ಟಿ-20 ವರ್ಲ್ಡ್ ಕಪ್.. 2 ಚಾಂಪಿಯನ್ಸ್ ಟ್ರೋಫಿ ಲಿಸ್ಟ್ ಔಟ್

727

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇದೀಗ ತಾನೆ ಐಸಿಸಿ ಟಿ-20 ವರ್ಲ್ಡ್ ಕಪ್ ಮುಗಿದೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸೀಸ್ ಗೆದ್ದು ಮೊದಲ ಬಾರಿಗೆ ಕಪ್ ಎತ್ತಿ ಹಿಡಿದೆ. ಮುಂದಿನ 8 ವರ್ಷಗಳಲ್ಲಿ ನಡೆಯುವ ಐಸಿಸಿ ಟೂರ್ನಿಯ ಲಿಸ್ಟ್ ನ್ನು ಬಿಡುಗಡೆ ಮಾಡಲಾಗಿದೆ.

2024ರಿಂದ 31ರ ತನಕ ಯಾವ ದೇಶಗಳಲ್ಲಿ ಯಾವ ಟೂರ್ನಿ ನಡೆಯುತ್ತೆ ಅನ್ನೋದನ್ನು ಐಸಿಸಿ ರಿಲೀಸ್ ಮಾಡಿದೆ. 2024ರ ಟಿ-20 ಟೂರ್ನಿಯನ್ನು ಅಮೇರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಸಲಾಗುತ್ತಿದೆ. 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ. 2026 ಟಿ-20 ವರ್ಲ್ಡ್ ಕಪ್ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.

2027ರಲ್ಲಿ ನಡೆಯಲಿರುವ ವಿಶ್ವ ಕಪ್ ಟೂರ್ನಿ ಸೌಥ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮಿಬಿಯಾದಲ್ಲಿ ನಡೆಸಲಾಗುತ್ತಿದೆ. 2028ರಲ್ಲಿ ನಡೆಯುವ ಟಿ-20 ವರ್ಲ್ಡ್ ಕಪ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫಿಕ್ಸ್ ಆಗಿದೆ. 2029ರ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲಿ. 2030ರ ಟಿ-20 ವಿಶ್ವ ಕಪ್ ಇಂಗ್ಲೆಂಡ್, ಐರ್ಲಾಂಡ್, ಸ್ಕಾಟ್ ಲೆಂಡ್ ನಲ್ಲಿ ನಡೆಯಲಿದೆ. 2031ರ ವಿಶ್ವ ಕಪ್ ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!