ಕೇವಲ 156 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

151

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ನ 25 ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರ ಲೆಕ್ಕಾಚಾರವನ್ನು ಲಂಕಾ ಪಡೆ ಉಲ್ಟಾ ಮಾಡಿದೆ.

ಶ್ರೀಲಂಕಾದ ಬೌಲರ್ ಗಳ ಎದುರು ಇಂಗ್ಲೆಂಡ್ ಪಡೆ ಮಂಕಾಗಿದ್ದು, 33.2 ಓವರ್ ಗಳಲ್ಲಿ ಕೇವಲ 156 ರನ್ ಗಳಿಗೆ ಆಲೌಟ್ ಆಗಿದ್ದಾರೆ. ಬೆನ್ ಸ್ಟೋಕ್ 43, ಬ್ರಿಸ್ಟೋ 30 ರನ್ ಗಳೆ ಗರಿಷ್ಠ ರನ್ ಆಗಿವೆ. ಲಂಕಾ ಪರ ಲಹಿರ್ ಕುಮಾರ್ 3, ಕುಸನ್ ರಜತ್, ಎಂಜಿಲೊ ಮ್ಯಾಥೋಸ್ ತಲಾ 2 ವಿಕೆಟ್, ಮಹೀಶ್ ತೀಕ್ಷಣಾ 1 ವಿಕೆಟ್ ಪಡೆದು ಮಿಂಚಿದರು. ಲಂಕಾ ಬ್ಯಾಟಿಂಗ್ ಮಾಡುತ್ತಿದ್ದು 4.3 ಓವರ್ ಗಳಿಗೆ 22 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!