ಏಕದಿನ ವಿಶ್ವಕಪ್: ಆಫ್ರಿಕಾ ಎದುರು ಲಂಕಾ ಉಡೀಸ್

218

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದ ನೆಲದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಇದೀಗ ಕಾವು ಏರುತ್ತಿದೆ. 4 ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಹೋಳಿಗೆ ಊಟ ಸವಿದಂತಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೌಥ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಅಕ್ಷರಶಃ ರನ್ ಮಳೆಯನ್ನು ಸುರಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಲಂಕಾ ನಾಯಕ ದುಶನ್ ಶಂಕಾ ಲೆಕ್ಕಾಚಾರವನ್ನು ಸಂಪೂರ್ಣ ಉಲ್ಟಾ ಮಾಡಲಾಯಿತು.

5 ವಿಕೆಟ್ ಗೆ ಬರೋಬ್ಬರಿ 428 ರನ್ ಗಳಿಸಿದ ಸೌಥ್ ಆಫ್ರಿಕಾ ತಂಡ ದಾಖಲೆಗಳ ಪಟ್ಟಿಯನ್ನೇ ಸಿದ್ಧಪಡಿಸಿದೆ. ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಒಂದೇ ಪಂದ್ಯದಲ್ಲಿ 3 ಶತಕಗಳು ಬಂದಿರುವುದು ಇದೆ ಮೊದಲು. 3 ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಸೌಥ್ ಆಫ್ರಿಕಾವಾಯಿತು. 2015ರಲ್ಲಿ ಆಸ್ಟ್ರೇಲಿಯಾ 417 ರನ್ ಗಳಿಸಿತ್ತು. 428 ರನ್ ಗಳಿಸುವ ಮೂಲಕ ಟೆಂಬಾ ಬುವುಮಾ ಪಡೆ ಅದನ್ನು ಉಡೀಸ್ ಮಾಡಿತು.

ಒಂದೇ ಪಂದ್ಯದಲ್ಲಿ 2 ಬಾರಿ 3 ಶತಕಗಳನ್ನು ಸಿಡಿಸಿದ ಏಕೈಕ ತಂಡವಾಗಿ ಆಫ್ರಿಕಾ ಹೊರಹೊಮ್ಮಿತು. 2015ರಲ್ಲಿ ಭಾರತದ ವಿರುದ್ಧ ಮೊದಲ ಬಾರಿಗೆ 3 ಶತಕಗಳು ಬಂದಿದ್ದವು. ಏಡನ್ ಮಾರ್ಕ್ರಾಮ್ 49 ಬೌಲ್ ಗಳಲ್ಲಿ ವೇಗದ ಶತಕ ಬಾರಿಸಿ ಐರ್ಲೆಂಡ್ ಆಟಗಾರ ಕೆವಿನ್ ಓ ಬ್ರಿಯನ್ 50 ಬೌಲ್ ಗಳಲ್ಲಿ ಶತಕ ಬಾರಿಸಿದ ದಾಖಲೆ ಮುರಿದರು.

ಕ್ವಿಂಟಾನ್ ಡಿಕಾಕ್ 100,  ದುಸೆನ್ 108, ಏಡನ್ ಮಾರ್ಕ್ರಾಮ್ 106 ರನ್ ಗಳಿಸಿದರು. ಲಂಕಾ ಪರ ದಿಲ್ಶಾನ್ ಮದಶಂಕಾ2, ರಜಿತ್, ಮ್ಯಾತೀಸ್, ದುನಿತ್ ತಲಾ 1 ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ಮೆಂಡೀಸ್ 76, ಅಸಲಂಕಾ 79, ನಾಯಕ ದುಶನ್ 68 ರನ್ ಗಳಿಸಿದರು. 44.5 ಓವರ್ ಗಳಲ್ಲಿ 326 ರನ್ ಗಳಿಗೆ ಆಲೌಟ್ ಆಗಿದೆ. ಆಫ್ರಿಕಾ ಪರ ಕೋಟಜಿ 3, ಜಾನ್ಸನ್, ರಬಡಾ, ಕೇಶ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ನಿಗಡಿ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!