ಮರಳಿ ‘ಕೈ’ ಹಿಡಿದ ನಟಿ ಭಾವನಾ

518

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಟಿ, ರಾಜಕಾರಣಿ ಭಾವನಾ ರಾಮಣ್ಣ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಮೂಲಕ ಮಾತೃಪಕ್ಷಕ್ಕೆ ವಾಸಪ್ ಬಂದಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾವನಾಗೆ ಶುಭಾಶಯ ತಿಳಿಸಿರುವ ಸುರ್ಜೆವಾಲ್, ಹೀಗೆ ಒಬ್ಬೊಬ್ಬರು ಕಾಂಗ್ರೆಸ್ ಸೇರ್ಪಡೆಯಾಗುವುದರಿಂದ ಮತ್ತಷ್ಟು ಶಕ್ತಿ ಬರುತ್ತೆ ಎಂದು ಹೇಳಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಲ್ಲಿ ಟಿಕೆಟ್ ಕೇಳಿದ್ದರು. ಅದು ಸಿಗದೆ ಹೋದಾಗ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಮರಳಿ ಕಾಂಗ್ರೆಸ್ ಸೇರಿದ್ದಾರೆ.




Leave a Reply

Your email address will not be published. Required fields are marked *

error: Content is protected !!