ಆನ್ಲೈನ್ ಕ್ಲಾಸ್ ವೇಳೆ ಅಪ್ಪನ ರಾಸಲೀಲೆ ಬಯಲು

313

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಕೋವಿಡ್ 19 ನಿಂದಾಗಿ ಶಾಲಾ, ಕಾಲೇಜುಗಳು ಇನ್ನು ಶುರುವಾಗಿಲ್ಲ. ಹೀಗಾಗಿ ಆನ್ಲೈನ್ ಕ್ಲಾಸ್ ಮುಂದುವರೆದಿದೆ. ಎಷ್ಟು ಮಕ್ಕಳು ಮೊಬೈಲ್ ಮೂಲಕ ವಿದ್ಯಾಭ್ಯಾಸ ಮಾಡ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲ ಮಕ್ಕಳ ಕೈಯಲ್ಲಿ ಮೊಬೈಲ್ ಇದೆ.

ಹೀಗೆ ಆನ್ಲೈನ್ ಕ್ಲಾಸ್ ಕೇಳುವ ವೇಳೆ ಅಪ್ಪನ ರಾಸಲೀಲೆಯೊಂದು ಬಯಲಾಗಿದೆ. ಅದನ್ನ ಮಗಳು ತಾಯಿಗೆ ತೋರಿಸಿದ ಘಟನೆ ಸಕ್ಕರೆ ನಾಡಿನ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಅನ್ನೋ ಗ್ರಾಮದಲ್ಲಿ ನಡೆದಿದೆ. ಮಗಳು ತೋರಿಸಿದ ವಿಡಿಯೋ ನೋಡಿ ತಾಯಿಗೆ ಶಾಕ್ ಆಗಿದೆ.

ಪತಿಯ ಕರ್ಮಕಾಂಡದಿಂದ ಕಣ್ಣೀರು ಹಾಕ್ತಿರುವ ಮಹಿಳೆ, ಇದೀಗ ಮಹಿಳಾ ಸಾಂತ್ವಾನ ಕೇಂದ್ರದ ಮೊರೆ ಹೋಗಿದ್ದಾರೆ. ಅಲ್ದೇ, ವಿರುದ್ಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!