ಬನಾರಸ್ ಮೋಷನ್ ಪೋಸ್ಟರ್ ರಿಲೀಸ್

679

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಬನಾರಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ನಿರ್ದೇಶಕರೆ ಹೇಳಿಕೊಂಡಂತೆ ನವೆಂಬರ್ 1ರಂದು ಇದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ರಿಲೀಸ್ ಮಾಡಬೇಕಿತ್ತು. ಆದ್ರೆ, ನಡೆಯಬಾರದ ಘಟನೆ ನಡೆದು ಎಲ್ಲರಿಗೂ ಆಘಾತ ತಂದಿದೆ.

ಇಂದು ಅವರ ಸಮಾಧಿಗೆ ತೆರಳಿ ಅವರಿಂದ ಆಶೀರ್ವಾದ ಪಡೆದು ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.  ಜೈದ್ ಖಾನ್ ಹಾಗೂ ಸೋನಲ್ ಮೊಂಟೆರಿಯೋ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಎನ್.ಕೆ ಪ್ರೊಡಕ್ಷನ್ ಅಡಿಯಲ್ಲಿ ತಿಲಕರಾಜ್ ಬಲ್ಲಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಸ್ಯಾಂಡಲ್ ವುಡ್ ಚಿತ್ರರಂಗದ ದಿಗ್ಗಜರು ಸೇರಿ ಎಲ್ಲರೂ ಶುಭ ಕೋರಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!