ದಾವಣಗೆರೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್

332

ದಾವಣೆಗೆರೆ: ಬೆಣ್ಣೆನಗರಿಯಲ್ಲಿ ನಿನ್ನೆ ಒದೇ ದಿನದಲ್ಲಿ ಬರೋಬ್ಬರಿ 21 ಕರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇಂದಿನಿಂದ ಎಲ್ಲೆಡೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದ್ರೆ, ದಾವಣೆಗೆರೆಯಲ್ಲಿ ಮಾತ್ರ ಇದೀಗ ನಿಷೇಧ ಹೇರಲಾಗಿದೆ.

ಒಂದೇ ದಿನದಲ್ಲಿ 21 ಕೇಸ್ ಬಂದಿದ್ದು, ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ನರ್ಸ್ ಯೊಬ್ಬರ ಸೋಂಕಿನ ಪ್ರಕರಣ ಇಷ್ಟೊಂದು ಅವಾಂತರ ಸೃಷ್ಟಿಸ್ತಿದೆ ಎಂದು ಸ್ಥಳೀಯರು ಮಾತ್ನಾಡಿಕೊಳ್ತಿದ್ದಾರೆ. ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ರೆ, ಮತ್ತಷ್ಟು ಅನಾಹುತ ಸಂಭವಿಸುತ್ತೆ ಅನ್ನೋ ಕಾರಣಕ್ಕೆ, ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.




Leave a Reply

Your email address will not be published. Required fields are marked *

error: Content is protected !!