ನವದೆಹಲಿ: ಲಾಕ್ ಡೌನ್ ನಿಂದಾಗಿ ಎಲ್ಲವುಗಳಂತೆ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ. ಇದರ ನಡುವೆ ನಾಳೆ ಜೆಇಇ ಹಾಗೂ ನೀಟ್ ಪರೀಕ್ಷೆಯ ಹೊಸ ವೇಳಾ ಪಟ್ಟಿ ಬಿಡುವುದಾಗಿ ತಿಳಿದು ಬಂದಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಬಗ್ಗೆ ತಿಳಿಸಿದ್ದು, ಲಾಕ್ ಡೌನ್ ಘೋಷಣೆಯಿಂದ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಲಾಗಿತ್ತು. ಈಗ ಲಾಕ್ ಡೌನ್ ಸಡಿಲಿಕೆ ಮಾಡಿರುವುದ್ರಿಂದ ಮೇ 5ರಂದು ಹೊಸ ವಳಾಪಟ್ಟಿ ರಿಲೀಸ್ ಮಾಡುವುದಾಗಿ ತಿಳಿಸಿದೆ.
ನಾಳೆ ಕೇಂದ್ರ ಸಚಿವ ರಮೇಶ ಪೋಖ್ರಿಯಾಲ್ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಿದ್ದಾರೆ ಅನ್ನೋದು ತಿಳಿದು ಬಂದಿದೆ.