ಗಂಡು ಹೆಣ್ಣು ಇಲ್ಲದೇ ನಡೆದ ಮದುವೆ!

973

ಬೆಳಗಾವಿ: ಅಲ್ಲಿ ಮದುವೆ ಸಂಭ್ರಮ ಸಡಗರ ಮನೆ ಮಾಡಿತ್ತು. ಶಾಸ್ತ್ರ ಸಂಪ್ರದಾಯದಂತೆ ಎಲ್ಲವೂ ರೆಡಿಯಾಗಿತ್ತು. ಊಟ ಉಪಚಾರ ಎಲ್ಲವೂ ಇತ್ತು. ಆದ್ರೆ, ವಧು ವರ ಮಾತ್ರ ಕತ್ತೆಗಳು. ಇದು ನಡೆದಿದ್ದು ಬೆಳಗಾವಿಯಲ್ಲಿ.

ಮಳೆಗಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಲಾಗಿದೆ. ಶಾಮಿಯಾನ ಹಾಕಿ, ಕತ್ತೆಗಳಿಗೆ ಬಾಸಿಂಗ ಕಟ್ಟಿ, ಆರತಿ ಬೆಳಗಿ, ಮಂತ್ರಘೋಷಗಳ ಜೊತೆಗೆ ವಾದ್ಯಮೇಳ ಜೊತೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ.

ಇನ್ನುಮದುವೆಗೆ ಬಂದವರಿಗೆ ಭರ್ಜರಿಯಾಗಿ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳು ಮದುವೆ ಮಾಡುವ ಪದ್ಧತಿ ಇನ್ನೂ ಅನೇಕ ಗ್ರಾಮಗಳಲ್ಲಿ ಜೀವಂತವಾಗಿದೆ. ಈ ಹಿಂದೆ ಕೊಟ್ಟಲಗಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿದಾಗ ಮಳೆಯಾದ ಪ್ರತೀತಿಯಿದೆ ಅನ್ನೋದು ಗ್ರಾಮಸ್ಥರ ನಂಬಿಕೆ. ಹೀಗಾಗಿ ಇಂದು ಸಹ ಕತ್ತೆಗಳ ಮದುವೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!