ಸಿಂದಗಿಗೆ ಆಗಮಿಸಿದ 89 ಕೂಲಿ ಕಾರ್ಮಿಕರು

523

ಬ್ರೇಕಿಂಗ್ ನ್ಯೂಸ್:

ಸಿಂದಗಿ: ಲಾಕ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು ಇದೀಗ ತಂತಮ್ಮ ಊರುಗಳಿಗೆ ಆಗಮಿಸ್ತಿದ್ದಾರೆ. ಇಂದು ಹುಬ್ಬಳ್ಳಿ–ಧಾರವಾಡದಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿಗೆ ಕೂಲಿ ಕಾರ್ಮಿಕರು ಆಗಮಿಸಿದ್ದಾರೆ.

ಒಂದು ತಿಂಗಳಿಂದ ಹುಬ್ಬಳ್ಳಿಯ ಹಳ್ಳಿಕಟ್ಟಿ ಹಾಗೂ ಧಾರವಾಡದಲ್ಲಿ ಇಟ್ಟಂಗಿ ಬಟ್ಟಿಯಲ್ಲಿ ಕೆಲಸಕ್ಕೆ ಹೋಗಿ ಸಿಲುಕಿಗೊಂಡಿದ್ದ ಕೂಲಿ ಕಾರ್ಮಿಕರು ಇಂದು ಬೆಳಗ್ಗೆ ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ್ರು. ಒಟ್ಟು 89 ಮಂದಿ ಸುಮಾರು 7 ಬಸ್ ಗಳ ಮೂಲಕ ಆಗಮಿಸಿದ್ದಾರೆ. ಅವರನ್ನ ಕೋವಿಡ್ ಪರೀಕ್ಷೆ ಮಾಡಿದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಯ್ತು.

ಹುಬ್ಬಳ್ಳಿ-ಧಾರವಾಡದಿಂದ ಒಟ್ಟು 89 ಮಂದಿ ಬಂದಿದ್ದಾರೆ. ತಾಲೂಕಿನ ಕುಮಸಗಿ 35, ದೇವಣಗಾಂವ 8, ಕಡ್ಲೇವಾಡ 10, ಕಡಣಿ 4, ಆಲಮೇಲ 2, ಬಳಗಾನೂರು 10, ತುರಗಿಹಳ್ಳಿ 7, ಸೋಂಪುರ 2, ಪುರದಾಳ 5, ಜೇವರ್ಗಿಯ ನೆಲೋಗಿ ಗ್ರಾಮದ 2, ಮಲ್ಲಬಾದ್ ತಾಲೂಕು 4 ಜನ ಕೂಲಿ ಕಾರ್ಮಿಕರು ಬಂದಿದ್ದಾರೆ ಎಂದು ಕಂದಾಯ ನಿರೀಕ್ಷಕರಾದ ಐ.ಎಂ ಮಕಾಂದಾರ ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ.

ಹೀಗೆ ದುಡಿಯಲು ಹೋಗಿ ಕಳೆದ ಒಂದೂವರೆ ತಿಂಗಳಿನಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕರು ಸ್ವಊರಿಗೆ ಬರುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಂತಮ್ಮ ಊರಿಗೆ ಮರಳು ವ್ಯವಸ್ಥೆ ಮಾಡಿದ ಹುಬ್ಬಳ್ಳಿ-ಧಾರವಾಡ ಜಿಲ್ಲಾಡಳಿತ ಹಾಗೂ ಸಿಂದಗಿ ತಾಲೂಕು ದಂಡಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!