ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ ಮತ್ತೆ 9 ಪ್ರಕರಣ

363

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಇಂದು 9 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಮುಂಜಾನೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಇದರಲ್ಲಿ 9 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿನ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.

ಬೀದರ 1, ವಿಜಯಪುರ 2, ತುಮಕೂರು 2, ಚಿಕ್ಕಬಳ್ಳಾಪುರ 1, ಬೆಳಗಾವಿ 1, ಬಾಗಲಕೋಟೆಯ ಜಮಖಂಡಿಯಲ್ಲಿ 1, ಬೆಂಗಳೂರು 1 ಪ್ರಕರಣ ಸೇರಿ 9 ಕೇಸ್ ದಾಖಲಾಗಿವೆ.

ಇನ್ನು ವಿಜಯಪುರದಲ್ಲಿ ದಾಖಲಾದ ಮೊದಲ ಕೇಸ್ 221 ನಿಂದಾಗಿ ಇದುವರೆಗೂ 28 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು 46 ಕೇಸ್ ಆಗಿದೆ.

ಇನ್ನು ರಾಜ್ಯದಲ್ಲಿ ಒಟ್ಟು 25 ಸಾವು ದಾಖಲಾಗಿವೆ. 255 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!