ಕೇಂದ್ರದ ಹೆಲ್ತ್ ಬುಲೆಟಿನ್: 2 ಲಕ್ಷದತ್ತ ಸೋಂಕಿತರ ಸಂಖ್ಯೆ

355

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಇದೀಗ ಕರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ವರದಿ ಪ್ರಕಾರ ಸೋಮವಾರ ದೇಶದಲ್ಲಿ 7,573 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 1,92,630ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರೊಂದಿಗೆ 2 ಲಕ್ಷದತ್ತ ಸೋಂಕಿತರ ಸಂಖ್ಯೆ ಹೊರಟಿದೆ.

ಇನ್ನು ಗುಣಮುಖ ಪ್ರಮಾಣ ಶೇಕಡ 48ರಷ್ಟು ಇದೆ. ಇದುವರೆಗೂ ದೇಶದಲ್ಲಿ 95,526 ಜನ ಗುಣಮುಖರಾಗಿದ್ದಾರೆ. 97,581 ಪ್ರಕರಣಗಳು ಚಾಲ್ತಿಯಲ್ಲಿವೆ. ಕೋವಿಡ್ 19ಗೆ 5,598 ಜನ ಬಲಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!