ಮುಂಗಾರು ಆಗಮನ: ಬಿತ್ತನೆ ಬೀಜಕ್ಕೆ ರೈತರ ಪರದಾಟ

581

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇನ್ನೇನು ರಾಜ್ಯಕ್ಕೆ ಮುಂಗಾರು ಪ್ರವೇಶವಾಗ್ತಿದೆ. ಹೀಗಾಗಿ ರೈತರು ಬಿತ್ತನೆಗೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ತಾರೆ. ಆದ್ರೆ, ರೈತರಿಗೆ ಇದೀಗ ಸರಿಯಾಗಿ ಬಿತ್ತನೆ ಬೀಜ, ಗೊಬ್ಬರ ಸಿಗ್ತಿಲ್ಲ ಅನ್ನೋದು ತಿಳಿದು ಬಂದಿದೆ.

ಇಷ್ಟು ದಿನಗಳ ಕಾಲ ಕರೋನಾ ಕಾಟದಿಂದ ಬೆಳೆದ ಬೆಳೆಯಲ್ಲ ಹಾಳಾಗಿ, ನಷ್ಟ ಅನುಭವಿಸಿದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವರ್ಷದ ಆರಂಭದ ಮಳೆಯ ಮೂಲಕ ಕೃಷಿ ಕೆಲಸಗಳಿಗೆ ಜೀವ ಬರುತ್ತೆ. ರೈತರು ಹೊಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದ್ರೆ, ಈ ಬಾರಿಗೆ ಅವರಿಗೆ ಅಗತ್ಯ ಪ್ರಮಾಣದಲ್ಲಿ ಬೀಜ ಹಾಗೂ ರಸಗೊಬ್ಬರ ಸಿಗ್ತಿಲ್ಲವೆಂದು ಹೇಳ್ತಿದ್ದಾರೆ.

ಅದರಲ್ಲೂ ರಾಯಚೂರು, ಕಲಬುರಗಿ, ಬೀದರ, ವಿಜಯಪುರ ಸೇರಿದಂತೆ ಉಳಿದ ಜಿಲ್ಲೆಗಳ ರೈತರಿಗೆ ಬಿತ್ತನೆ ಬೀಜದ ಚಿಂತೆ ಶುರುವಾಗಿದೆ. ಮಳೆ ಶುರುವಾಗುವ ಮೊದ್ಲೇ ಎಲ್ಲವನ್ನ ಸಂಗ್ರಹಿಸಿಟ್ಟುಕೊಂಡು ಬಿತ್ತನೆ ಕಾರ್ಯ ನಡೆಸಿದ್ರೆ, ಮಳೆ ಬಂದ್ಮೇಲೆ ಮೊಳಕೆಯೊಡೆಯಲು ಶುರು ಮಾಡುತ್ತವೆ. ಆದ್ರೆ, ಎರೆಡಮೂರು ದಿನಗಳಲ್ಲಿ ಮುಂಗಾರು ಶುರುವಾಗ್ತಿದ್ರೂ, ಬಿತ್ತನೆ ಬೀಜದ ಸಮಸ್ಯೆಯಾಗ್ತಿದೆ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!