ಕಿರುತರೆ ನಟಿ ದಿವ್ಯಾ ನಿಧನ

324

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಕರೋನಾ ಸೋಂಕಿಗೆ ತುತ್ತಾಗಿದ್ದ ಹಿಂದಿ ಕಿರುತರೆ ನಟಿ ದಿವ್ಯಾ ಭಟ್ನಾಗರ್ ಮೃತಪಟ್ಟಿದ್ದಾರೆ. 34 ವರ್ಷದ ದಿವ್ಯಾ ಕಳೆದ ವಾರ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಯೆ ರಿಷ್ತಾ ಕ್ಯಾ ಕೆಹಲಾತಾ ಹೈ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿರುವ ದಿವ್ಯಾ ಸಾಕಷ್ಟು ಖ್ಯಾತಿ ಪಡೆದಿದ್ರು. ನಾನು ಬೇಗ ಗುಣಮುಖಳಾಗಿ ಬರಲಿ ಎಂದು ದಯವಿಟ್ಟು ಪ್ರಾರ್ಥಿಸಿ ಅಂತಾ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ರು. ಆದ್ರೆ, ವಿಧಿಯಾಟ ಬೇರೆಯಾಗಿದೆ.

ದಿವ್ಯಾ ದಾಂಪತ್ಯದಲ್ಲಿ ಕಲಹ ಮೂಡಿದ್ರಿಂದ ಅವರು ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ರು. ಪತಿಯ ಹಿಂಸೆಯಿಂದ ಮಗಳ ಆರೋಗ್ಯ ಹೆದಗೆಟ್ಟಿತ್ತು. ಇದರ ಜೊತೆ ಕೋವಿಡ್ ಕಾಣಿಸಿಕೊಂಡಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!