ಮನೆ, ಅಂಗಡಿ ಮಾಲೀಕರು ಯಾಕೆ ಒಂದಿಷ್ಟು ಕರುಣೆ ತೋರಬಾರದು?

459

ಪ್ರಜಾಸ್ತ್ರ ವಿಶೇಷ:

ಇಡೀ ಜಗತ್ತು ಕಾಣದ ಜೀವಿಯಿಂದ ಭೀತಿಗೊಂಡಿದೆ. ಸಾವಿರ ಸಾವಿರ ಸಾವುಗಳು ಸಂಭವಿಸಿವೆ. ಭಾರತದಲ್ಲಿಯೂ ಸಹ ಸಾವಿನ ಸಂಖೆ 16 ಆಗಿದೆ. ರಾಜ್ಯದಲ್ಲಿ 2 ಪ್ರಕರಣಗಳು ನಡೆದಿವೆ. ಹೀಗಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ದುಡಿಯುವ ಕೈಗಳು ಖಾಲಿ ಖಾಲಿ. ಹೀಗಾಗಿ ಏಪ್ರಿಲ್ 14ರ ತನಕ ಜೀವನ ನಡೆಸೋದು ಹೇಗೆ ಅಂತಿದ್ದಾರೆ.

ನಗರ, ಪಟ್ಟಣಗಳಲ್ಲಿ ವಾಸಿಸುವ ಬಹುತೇಕರು ಬಾಡಿಗೆ ಮನೆಯಲ್ಲಿದ್ದು ದುಡಿಯುವ ವರ್ಗದವರು. ಅವರು ಇದೀಗ ಈ ತಿಂಗಳು ಹಾಗೂ ಮುಂದಿನ ತಿಂಗಳು ಬಾಡಿಗೆ ಕೊಡುವುದು ಹೇಗೆ ಅಂತಿದ್ದಾರೆ. ನಿತ್ಯದ ಉಪಜೀವನಕ್ಕೆ ಹಣ ಬೇಕು. ಅದರ ಜೊತೆಗೆ ನೀರು ಬಿಲ್, ಲೈಟ್ ಬಿಲ್, ಜೂನ್ ತಿಂಗಳಲ್ಲಿ ಮಕ್ಕಳ ಶಾಲೆ ಖರ್ಚು, ಸೇರಿದಂತೆ ಹತ್ತಾರು ಬಿಲ್ ಗಳು ಕೊರಳಿಗೆ ಸುತ್ತಿಕೊಳ್ಳುತ್ತವೆ. ಇದರ ಜೊತೆಗೆ ಮುಖ್ಯವಾಗಿ ಮನೆ ಹಾಗೂ ಅಂಗಡಿಯ ಬಾಡಿಗೆ.

ಮಾನೆ, ಅಂಗಡಿ ಬಾಡಿಗೆ ಕಟ್ಟಲು ಜನರು ಚಿಂತೆ ಮಾಡ್ತಿದ್ದಾರೆ. ಇದರ ಜೊತೆಗೆ ಕೆಲವರು ಮನೆ ಬಾಡಿಗೆ ಜೊತೆಗೆ ಅಂಗಡಿ ಬಾಡಿಗೆ ಕಟ್ಟುವುದು ಹೇಗೆ ಅಂತಿದ್ದಾರೆ. ಯಾಕಂದ್ರೆ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಹೀಗಾಗಿ ಮನೆ ಹಾಗೂ ಅಂಗಡಿ ಮಾಲೀಕರು ಒಂದಿಷ್ಟು ಕರುಣೆ ತೋರಬೇಕು. ಇಂಥಾ ಹೊತ್ತಿನಲ್ಲಿ ಮಾನವೀಯತೆ ತೋರಿದ್ರೆ ದೇಶ ಸೇವೆಯಲ್ಲಿ ನಿಮ್ಮ ಪಾಲು ಇರುತ್ತೆ. ಮನೆ ಹಾಗೂ ಅಂಗಡಿ ಮಾಲೀಕರು ಬಾಡಿಗೆ ಪಡೆಯುವ ವಿಚಾರದಲ್ಲಿ ಬಾಡಿಗೆದಾರರ ಪರ ನಿಲ್ಲಬೇಕಿದೆ.

ಬಡ ಹಾಗೂ ಮಧ್ಯಮ ಜನರನ್ನ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಸಹ ಈ ಬಗ್ಗೆ ಸ್ಪಷ್ಟ ಯೋಚಿಸಬೇಕಿದೆ. ಸುಮಾರು 10 ರಿಂದ 15 ಸಾವಿರ ರೂಪಾಯಿ ಒಳಗೆ ಇರುವ ಬಾಡಿಗೆದಾರರನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಒಂದು ನಿರ್ಧಾಕ್ಕೆ ಬರಬೇಕಿದೆ. ಇದ್ರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ! ಕಟ್ಟಡಗಳ, ಮನೆಗಳ ಮಾಲೀಕರಲ್ಲಿ ಸರ್ಕಾರ ಮನವಿ ಮಾಡಿಕೊಂಡು ಒಂದೆರಡು ತಿಂಗಳು ಬಾಡಿಗೆ ಪಡೆಯಬಾರದೆಂದು ಅಥವ ಅರ್ಧ ಬಾಡಿಗೆ ಪಡೆಯಬೇಕೆಂದು ಏನಾದ್ರೂ ಸೂಚಿಸಿದ್ರೆ ಆರ್ಥಿಕದಿಂದ ತತ್ತರಿಸಿ ಹೋಗಿರುವ ಜನಕ್ಕೆ ಜೀವ ಬಂದಂತಾಗುತ್ತೆ. ಹೀಗಾಗಿ ತಮ್ಮದು ಜನಪರ ಸರ್ಕಾರ ಅನ್ನೋದು ಜನಕ್ಕೆ ಸಾಬೀತು ಪಡಿಸಬೇಕಿದೆ. ಇನ್ನು ಮನೆ, ಅಂಗಡಿ ಮಾಲೀಕರಾದವರು ಒಂದಿಷ್ಟು ಮನಸ್ಸು ಮಾಡಿ ಮಾನವೀಯತೆಯನ್ನ ಎತ್ತಿ ಹಿಡಿಯಬೇಕಿದೆ. ಇದು ‘ಪ್ರಜಾಸ್ತ್ರ’ದ ಮನವಿ ಸಹ ಆಗಿದೆ.




Leave a Reply

Your email address will not be published. Required fields are marked *

error: Content is protected !!