ಖಾಕಿ ಬಲೆಗೆ ಹನಿ ಟ್ರ್ಯಾಪ್ ಟೀಂ

230

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಿದ್ದರೂ ಜನರು ಎಚ್ಚೆತ್ತುಕೊಳ್ಳದೆ ಮೋಸ ಹೋಗುತ್ತಿರುವುದಕ್ಕೆ ಈ ಪ್ರಕರಣ ಮತ್ತೊಂದು ಸಾಕ್ಷಿ. ಪುಟ್ಟೇನಹಳ್ಳಿ ಠಾಣೆ ಪೊಲೀಸರು ಇವರು ಖದೀಮರನ್ನು ಬಂಧಿಸಿದ್ದು, ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ.

ಅಬ್ದುಲ್ ಖಾದರ್, ಯಾಸಿನ್, ಶರಣಪ್ರಕಾಶ ಬಳಿಗೇರ ಬಂಧಿತರು. ಯುವತಿ ಹಾಗೂ ಇನ್ನೊಬ್ಬ ಎಸ್ಕೇಪ್ ಆಗಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಜೆ.ಪಿ ನಗರದ ವಿನಾಯಕ ನಗರಕ್ಕೆ ಯುವಕನೊಬ್ಬನನ್ನು ಕರೆಸಿಕೊಂಡ ಈ ಗ್ಯಾಂಗ್ ಹನಿ ಟ್ರ್ಯಾಪ್ ಮೂಲಕ 50 ಸಾವಿರ ರೂಪಾಯಿ ದೋಚಿತ್ತು. ಈ ಸಂಬಂಧ ಯುವಕ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನಿಬ್ಬರ ಬಂಧನದ ಕಾರ್ಯಾಚರಣೆ ನಡೆಸಿದ್ದಾರೆ.

ಟೆಲಿಗ್ರಾಂ ಮೂಲಕ ಹುಡುಗರನ್ನು ಯುವತಿ ಪರಿಚಯಿಸಿಕೊಳ್ಳುತ್ತಿದ್ದಳು. ನಂತರ ವಿನಾಯಕ ನಗರದಲ್ಲಿರುವ ಮನೆಗೆ ಕರೆಯುತ್ತಿದ್ದಳು. ಅಲ್ಲಿಗೆ ಹೋದರೆ ಸಾಕು ಪ್ರೀ ಪ್ಲಾನ್ ಪ್ರಕಾರ ಹನಿ ಟ್ರ್ಯಾಪ್ ಗೆ ಒಳಗಾಗುತ್ತಿದ್ದರು. ಯುವತಿಯೊಂದಿಗೆ ಇರುತ್ತಿದ್ದ ಗಂಡ್ಮಕ್ಕಳ ತಂಡ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಿದ್ದರು. ಹುಡುಗನ ಬಳಿಯ ಮೊಬೈಲ್ ಕಸೆದುಕೊಂಡು ವಿಡಿಯೋ ಮಾಡಿ, ಅದರಲ್ಲಿರುವ ಕಾಂಟೆಕ್ಟ್ ಲಿಸ್ಟ್ ನಲ್ಲಿರುವವರಿಗೆ ಕಳಿಸುತ್ತೇವೆ ಅಂತಾ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಹೀಗೆ ಅನೇಕರಿಂದ ಸುಮಾರು 30 ಲಕ್ಷ ರೂಪಾಯಿ ತನಕ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ತನಿಖೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!