ಕಿರುತರೆ ನಟಿ, ನಿರೂಪಕಿ ಸೂಸೈಡ್?

351

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚೆನ್ನೈ: ತಮಿಳುನಾಡಿನ ಖ್ಯಾತ ಕಿರುತರೆ ನಟಿ, ನಿರೂಪಕಿ ವಿಜೆ ಚೈತ್ರಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಹೋಟೆಲ್ ವೊಂದರಲ್ಲಿ ಪತ್ತೆಯಾಗಿದೆ.

ನಗರದ ನಜರೀತ್ ಪೆಟೈ ಎಂಬಲ್ಲಿನ ಖಾಸಗಿ ಹೋಟೆಲ್ ವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 28 ವರ್ಷದ ವಿಜೆ ಚೈತ್ರಾ ಇತ್ತೀಚೆಗೆ ಉದ್ಯಮಿ ಹೇಮಂತ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಅವರೊಂದಿಗೆ ವಾಸ ಸಹ ಮಾಡ್ತಿದ್ರು ಎನ್ನಲಾಗ್ತಿದೆ. ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ಬುಧವಾರ ನಸುಕಿನ ಜಾವ ಸುಮಾರು 2.30ರ ವೇಳೆಗೆ ಹೋಟಲ್ ಗೆ ಬಂದಿದ್ದಾರಂತೆ.

ಈ ಬಗ್ಗೆ ಹೇಮಂತ ಮಾತ್ನಾಡಿದ್ದು, ಶೂಟಿಂಗ್ ಮುಗಿಸಿಕೊಂಡು ಬಂದ್ಮೇಲೆ ಸ್ಥಾನಕ್ಕೆಂದು ರೂಮಿಗೆ ಹೋದ್ರು. ತುಂಬಾ ಸಮಯವಾದ್ರೂ ಬರಲಿಲ್ಲ. ಹೀಗಾಗಿ ಬಾಗಿಲು ಬಡೆದರೂ ಪ್ರತಿಕ್ರಿಯೆ ನೀಡಲಿಲ್ಲ. ಕೂಡಲೇ ಹೋಟೆಲ್ ಸಿಬ್ಬಂದಿಯಿಂದ ನಕಲಿ ಕೀ ಬಳಸಿ ಬಾಗಿಲು ತೆರೆದಾಗ ರೂಮಿನಲ್ಲಿ ಚೈತ್ರಾ ನೇಣುಬಿಗಿದ ಸ್ಥಿತಿಯಲ್ಲಿದ್ರು ಎಂದು ಹೇಳಿದ್ದಾರಂತೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!