ನ.6ರಿಂದ ಹುಬ್ಬಳ್ಳಿ ಟು ದೆಹಲಿಗೆ ಫ್ಲೈಟ್

470

ಹುಬ್ಬಳ್ಳಿ: ಇನ್ಮುಂದೆ ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ವಿಮಾನ ಹಾರಾಟ ನಡೆಸಲಿದೆ. ನವೆಂಬರ್ 6ರಿಂದ ದೆಹಲಿಯ ಎರಡನೇ ವಿಮಾನ ನಿಲ್ದಾಣ ಹಿಂಡಾನ್ ಗೆ ನೇರವಾಗಿ ಟ್ರಾವಲ್ ಮಾಡಲಿದೆ.

ಉಡಾನ್ ಯೋಜನೆಯ ಅತ್ಯಂತ ದೊಡ್ಡ ವಾಣಿಜ್ಯ ಏರ್ ಟ್ರಾವಲ್ ಮಾರ್ಗವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ತಿರುಪತಿ, ಅಹಮದಾಬಾದ್, ಮುಂಬೈ ನಂತರ ಹಿಂಡಾನ್ 7ನೇ ಸ್ಟಾರ್ ಏರ್ ಕಾರ್ಯನಿರ್ವಹಿಸ್ತಿದೆ. ಅಕ್ಟೋಬರ್ 11ರಿಂದ ಈ ನಿಲ್ದಾಣ ಶುರುವಾಗಿದೆ.

ಸ್ಟಾರ್ ಏರ್ ವಿಮಾನ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಬುಧವಾರ, ಗುರುವಾರ ಹಾಗೂ ಶನಿವಾರ ಸಂಚರಿಸುತ್ತೆ. 3,699 ರೂಪಾಯಿಂದ ಟಿಕೆಟ್ ಬೆಲೆ ಶುರುವಾಗಲಿದೆ. ಮಧ್ಯಾಹ್ನ 1.05ಕ್ಕೆ ಬಿಡುವ ವಿಮಾನ 3.45 ಹಿಂಡಾನ್ ತಲುಪುತ್ತೆ. 4.10ಕ್ಕೆ ಅಲಿಂದ ಹೊರಟು 6.50ಕ್ಕೆ ಹುಬ್ಬಳಿಗೆ ಬರಲಿದೆ. ಶನಿವಾರದಂದು ಹುಬ್ಬಳಿಯಿಂದ 11.50ಕ್ಕೆ ಹೊರಟು 2.30ಕ್ಕೆ ತಲುಪುತ್ತೆ. 3ಗಂಟೆಗೆ ಅಲ್ಲಿಂದ ಹೊರಟು 5.40ಕ್ಕೆ ಹುಬ್ಬಳ್ಳಿಗೆ ಬರುತ್ತೆ.

ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ತಿರುಪತಿ ನಡುವೆ ಈಗಾಗ್ಲೇ ಸ್ಟಾರ್ ವಿಮಾನ ತನ್ನ ಕಾರ್ಯವನ್ನ ನಿರ್ವಹಿಸ್ತಿದೆ. ಇದೀಗ ಹುಬ್ಬಳ್ಳಿ-ದೆಹಲಿ ನಡುವೆ ಸಂಚರಿಸಲಿದೆ. ಹಿಂಡಾನ್ ನಿಲ್ದಾಣ ದೆಹಲಿಯಿಂದ 35 ಕಿಲೋ ಮೀಟರ್ ದೂರದಲ್ಲಿದೆ.




Leave a Reply

Your email address will not be published. Required fields are marked *

error: Content is protected !!