ಅಂದು ಕಣ್ಣೀರು ಹಾಕಿದ್ದ ಬಾಲಕಿಗೆ 3 ತಿಂಗಳ ಬಳಿಕ ಸಿಕ್ತು ಫಲ

216

ಪ್ರಜಾಸ್ತ್ರ ಸುದ್ದಿ

ಕೊಡಗು: ಕರೋನಾದಿಂದ ಜಿಲ್ಲಾಸ್ಪತ್ರೆಗೆ ಸೇರಿದ್ದ ತಾಯಿ ಮೃತಪಡುತ್ತಾಳೆ. ಆಕೆಯೊಂದಿಗೆ ಕಳೆದ ದಿನಗಳ ನೆನಪಿಗಾಗಿ ಮೊಬೈಲ್ ನಲ್ಲಿ ಫೋಟೋಗಳು ಇರುತ್ತವೆ. ಆದ್ರೆ, ಅದ್ಯಾರೋ ಕಳ್ಳತನ ಮಾಡಿರುತ್ತಾರೆ. ಹೀಗಾಗಿ ಬಾಲಕಿ ಕಣ್ಣೀರು ಹಾಕುತ್ತಾ ಮೊಬೈಲ್ ಹುಡುಕಿಕೊಡಿ ಎಂದು ಜಿಲ್ಲಾಧಿಕಾರಿ ಸೇರಿ ಎಲ್ಲರ ಬಳಿ ಬೇಡಿಕೊಂಡಿದ್ದಳು.

ಬಾಲಕಿಯ ಹೃದಯವಿದ್ರಾವಕ ಪರಿಸ್ಥಿತಿ ಕಂಡು ಪ್ರತಿಯೊಬ್ಬರು ಕಣ್ಣೀರು ಹಾಕಿದ್ರು. ಇದೀಗ ಆ ಮಗುವಿಗೆ ಫೋನ್ ಮರಳಿ ಸಿಕ್ಕಿದೆ. ಕೊಡಗು ಪೊಲೀಸರು ಮೊಬೈಲ್ ಪತ್ತೆಗೆ ಸತತ ಮೂರು ತಿಂಗಳಿಂದ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.

ಕಳೆದ ಮೇ 16ರಂದು ಕುಶಾಲನಗರದ ಪ್ರಭಾ ಎಂಬುವರು ಕೋವಿಡ್ ನಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ರು. ಈ ವೇಳೆ ಇವರ ಮೊಬೈಲ್ ಕಳ್ಳತನವಾಗಿತ್ತು. ಇದ್ರಿಂದಾಗಿ ಮಗಳು ಹೃತೀಕ್ಷಾ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಳು. ಮೊಬೈಲ್ ಆಸ್ಪತ್ರೆ ಗೋಡೌನ್ ನಲ್ಲಿ ಪತ್ತೆಯಾಗಿದ್ದು, ಮೇಲಿನ ಕವರ್ ಬದಲಾಗಿದೆ. ಅದರಲ್ಲಿನ ಡೇಟಾ ಹಾಗೆ ಇದೆ. ಇದ್ರಿಂದಾಗಿ ಬಾಲಕಿ ಹೃತೀಕ್ಷಾಗೆ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!