ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್

190

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾ ವಿರುದ್ಧ ಇಂಗ್ಲೆಂಡ್ ತಂಡ ಬುಧುವಾರ ಗೆಲುವು ಸಾಧಿಸಿತು. ಇಂಗ್ಲೆಂಡ್ ತಂದ ಭರ್ಜರಿ ಆಟದಿಂದಾಗಿ ಬಾಂಗ್ಲಾದೇಶ ಸೋಲು ಒಪ್ಪಿಕೊಳ್ಳಬೇಕಾಯಿತು. ಹೀಗಾಗಿ 8 ವಿಕೆಟ್ ಗಳ ಅಂತರದಿಂದ ವಿಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ ಬಾಂಗ್ಲಾ ಟೀಂ ಟೈಮಲ್ ಮಿಲ್ಸ್, ಲಿವಿಂಗ್ ಸ್ಟೋನ್, ಮೋಯಿನ್ ಅಲಿ ಭರ್ಜರಿ ಬೌಲಿಂಗ್ ದಾಳಿಯಿಂದಾಗಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಬಾಂಗ್ಲಾ ಮುಶ್ಚಿಕುರ್ರಹೀಂ(29), ಮಹ್ಮುದುಲ್ಲಾ(19) ನಸುಮ್ ಅಹ್ಮದ್(19) ಅವರು ಗಳಿಸಿದ್ದೆ ಸ್ಕೋರ್ ಗರಿಷ್ಠವಾಗಿದೆ.

ಈ ರನ್ ಚೇಸ್ ಮಾಡಿದ ಇಂಗ್ಲೆಂಡ್ ಟೀಂ ಜೇಸನ್ ರಾಯ್(61), ಡೇವಿಡ್ ಮಲಾನ್(28) ರನ್ ಗಳಿಸಿದರು. 14.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಗೆಲುವು ಸಾಧಿಸಿತು.




Leave a Reply

Your email address will not be published. Required fields are marked *

error: Content is protected !!