244ಕ್ಕೆ ಟೀಂ ಇಂಡಿಯಾ ಆಲೌಟ್

231

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ ಕೊಹ್ಲಿ ಬಳಗ 244 ರನ್ ಗಳಿಗೆ ಆಲೌಟ್ ಆಗಿದೆ. 233 ರನ್ ಗಳೊಂದಿಗೆ ಆಟ ಮುಂದುವರೆಸಿದ್ದ ಭಾರತ 11 ರನ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಆಸೀಸ್ ಪಡೆಗೆ 244 ರನ್ ಗಳ ಸಾಧಾರಣ ಗುರಿ ನೀಡಿದೆ.

ಮೊದಲ ದಿನದ ಆಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತ್ತು. 2ನೇ ದಿನದ ಆಟ ಶುರುವಾಗುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ವಿಕೆಟ್ ಕಳೆದುಕೊಂಡಿತು. 15 ರನ್ ಗೆ ಅಶ್ವಿನ್ ಔಟ್ ಆದ. ನಂತರ 2 ರನ್ ಆಗುವಷ್ಟರಲ್ಲಿ ವೃದ್ಧಿಮಾನ್ ಶಾ ಸಹ 9 ರನ್ ಗೆ ಔಟ್ ಆದ. ಇದಾದ್ಮೇಲೆ ಉಮೇಶ ಯಾದ 6, ಶೆಮಿ ಶೂನ್ಯಕ್ಕೆ ಔಟ್ ಆದ್ರು. ಈ ಮೂಲಕ ಪ್ರಥಮ ಇನ್ನಿಂಗ್ಸ್ ನಲ್ಲಿ 93.1 ಓವರ್ ಗಳಲ್ಲಿ ಟೀಂ ಇಂಡಿಯಾ 244 ರನ್ ಗಳಿಗೆ ಸರ್ವಪತನ ಕಂಡಿತು.

ಆಸೀಸ್ ಪರ ಮಿಚಲ್ ಸ್ಟ್ರಾಕ್ 4 ಹಾಗೂ ಕಮಿನ್ಸ್ 3 ವಿಕೆಟ್ ಪಡೆದು ಮಿಂಚಿದ್ರು. ಲೇಯಾನ್ ಹಾಗೂ ಹಝಲ್ ವುಡ್ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!