ಪಾಕ್ ವಿರುದ್ಧ ಭಾರತ ಸೋಲು: ಚಾಹಲ್ ಬಿಟ್ಟಿದ್ದಕ್ಕೆ ಎಲ್ಲೆಡೆ ಆಕ್ರೋಶ

238

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೀನಾಯವಾಗಿ ಸೋಲು ಅನುಭವಿಸಿದೆ. ಈ ಮೂಲಕ ವರ್ಲ್ಡ್ ಕಪ್ ಇತಿಹಾಸದಲ್ಲಿಯೇ ಎಂದೂ ಸೋಲದ ಭಾರತ ಪಾಕ್ ವಿರುದ್ಧದ 200ನೇ ಪಂದ್ಯದಲ್ಲಿ ಸೋಲು ಕಂಡಿದೆ.

ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಕ್ಯಾಪ್ಟನ್ ಬಾಬರ್, 151 ರನ್ ಗಳಿಗೆ ಭಾರತವನ್ನು ಕಟ್ಟಿ ಹಾಕಿದರು. ಇಲ್ಲಿ ಭಾರತದ 7 ವಿಕೆಟ್ ಕಳೆದುಕೊಂಡಿತು. 152 ರನ್ ಗಳ ಗುರಿಯನ್ನು 10 ವಿಕೆಟ್ ಗಳ ಅಂತರದಿಂದ ಪಾಕ್ ಗೆಲ್ಲುವ ಮೂಲಕ ವಿಶ್ವಕಪ್ ನಲ್ಲಿ ಎಂದೂ ಸೋಲದ ಟೀಂ ಇಂಡಿಯಾಗೆ ಸೋಲಾಯಿತು.

ಒಂದೂ ವಿಕೆಟ್ ತೆಗೆಯಲು ಆಗದ ಟೀಂ ಇಂಡಿಯಾ ಬಗ್ಗೆ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಅದ್ಭುತ್ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ನನ್ನು ಟೂರ್ನಿಗೆ ಕೈ ಬಿಟ್ಟಿದ್ದಕ್ಕೆ ಕಿಡಿ ಕಾರುತ್ತಿದ್ದಾರೆ. ಸಾಕಷ್ಟು ಫಾರ್ಮ್ ನಲ್ಲಿರುವ ಚಾಹಲ್ ಇಲ್ಲದೆ ಇರೋದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಶೆಮಿ, ಬೂಮ್ರಾ, ಚಕ್ರವರ್ತಿ, ಜಡೇಜಾ, ಭುವನೇಶ್ವರ್ ಕುಮಾರ್ ಖಾಲಿ ಕೈಯಲ್ಲಿ ಮರಳಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ರೋಹಿತ್ ಬದಲು ಇಶಾನ್ ಕಿಶನ್ ನನ್ನು ಕಣಕ್ಕೆ ಇಳಿಸಬೇಕಿತ್ತು. ಎಲ್ಲ ಯಡವಟ್ಟು ಮಾಡಿಕೊಂಡು ಸೋತಿದೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!