ಇಂದಿನಿಂದ ಶುರುವಾಯ್ತು 1-5ನೇ ತರಗತಿ ವಿದ್ಯಾರ್ಥಿಗಳ ಕಲರವ

252

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಕಳೆದ 2 ವರ್ಷಗಳಿಂದ ಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿಗಳು ಇಂದಿನಿಂದ ಶಾಲೆ ಕಡೆ ಮುಖ ಮಾಡುತ್ತಿವೆ. ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳ ಕ್ಲಾಸ್ ಶುರುವಾಗಿವೆ. ಇಂದಿನಿಂದ 1-5ನೇ ತರಗತಿ ವಿದ್ಯಾರ್ಥಿಗಳ ಕ್ಲಾಸ್ ಶುರುವಾಗಿದೆ.

ಕರೋನಾ ಕಾರಣಕ್ಕೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಒಪ್ಪಿಗೆ ನೀಡಿರಲಿಲ್ಲ. ಈಗ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಇದರ ಜೊತೆಗೆ ಹಲವು ಷರತ್ತುಗಳು ಸಹ ಇವೆ. ಮಕ್ಕಳಿಗೆ ಕಡ್ಡಾಯವಾಗಿ ಶಾಲೆ ಬನ್ನಿ ಎನ್ನುವಂತಿಲ್ಲ. ಹಾಜರಾತಿ ಕಡ್ಡಾಯವಲ್ಲ. ಶಾಲೆಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯ. ಶಿಕ್ಷಕರೆಲ್ಲ ಎರಡೂ ಡೋಸ್ ಲಸಿಕೆ ಪಡೆದಿರಬೇಕು.

ಹೀಗೆ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಇಂದಿನಿಂದ ಪ್ರಾಥಮಿಕ ಹಂತದ ತರಗತಿಗಳು ಪ್ರಾರಂಭವಾಗಿದ್ದು, ಚಿಣ್ಣರ ಕಲರವ ಜೋರಾಗಲಿದೆ. ಕರೋನಾ ಕಾರ್ಮೋಡ ಸರೆದು ಮಕ್ಕಳು ಖುಷಿಯಿಂದ ಶಾಲೆಗೆ ಬರಲಿ ಅನ್ನೋದು ಎಲ್ಲರ ಆಶಯ.




Leave a Reply

Your email address will not be published. Required fields are marked *

error: Content is protected !!