ಟೀಂ ಇಂಡಿಯಾ ಮಾರಕ ಬೌಲಿಂಗ್ ಗೆ ಒಲಿದ ಸರಣಿ

197

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಸೌಥ್ ಆಫ್ರಿಕಾ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ 2-1ರಿಂದ ಸರಣಿ ವಶಪಡಿಸಿಕೊಂಡಿದೆ. ಭಾರತದ ಮಾರಕ ಬೌಲಿಂಗ್ ನಿಂದಾಗಿ ಹರಿಣಿಗಳು 27.1 ಓವರ್ ನಲ್ಲಿ 99 ರನ್ ಗಳಿಗೆ ಆಲೌಟ್ ಆಯಿತು.

ಈ ಸ್ಕೋರ್ ಬೆನ್ನು ಹತ್ತಿದ ಟೀಂ ಇಂಡಿಯಾ 19.1 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿ ಗೆಲುವು ಸಾಧಿಸಿತು. ಶುಭನಂ ಗಿಲ್ 49, ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ನಾಯಕ ಧವನ್ 8, ಇಶಾನ್ ಕಿಶಾನ್ 10, ಸಂಜು ಸ್ಯಾಮ್ಸನ್ 2 ರನ್ ನಾಟೌಟ್. ಸೌಥ್ ಆಫ್ರಿಕಾ ಪರ ನಿಗಡಿ, ಪಾರ್ಟಿನ್ ತಲಾ 1 ವಿಕೆಟ್ ಪಡೆದರು.

ಕುಲದೀಪ್ ಯಾದವ್ 4 ವಿಕೆಟ್, ವಾಷಿಂಗ್ಟನ್,  ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆಯುವ ಮೂಲಕ ಪ್ರವಾಸಿಗರ ಬೆನ್ನುಮೂಳೆ ಮುರಿದರು. 34 ರನ್ ಗಳಿಸಿದ ಹೆನ್ರಿಕ್ ಸ್ಕೋರ್ ಗರಿಷ್ಟವಾಗಿದೆ. ಉಳಿದಂತೆ ಎಲ್ಲರು ಒಂದಂಕಿಗೆ ಔಟ್ ಆದರು.




Leave a Reply

Your email address will not be published. Required fields are marked *

error: Content is protected !!