ಟೆಸ್ಟ್ ಸರಣಿ ಭಾರತದ ಕೈ ವಶ

495

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 238 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ದೊಂದಿಗೆ ಕೈ ವಶ ಮಾಡಿಕೊಂಡಿದೆ.

2ನೇ ಇನ್ನಿಂಗ್ಸ್ ನಲ್ಲಿ 303 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಭರ್ಜರಿ 447 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಬೂಮ್ರಾ ದಾಳಿ ಲಂಕಾ ಪಡೆ 208 ರನ್ ಗಳಿಗೆ ಆಲೌಟ್ ಆಗಿದೆ.

ನಾಯಕ ಕರುಣರಂತೆ 107 ಹಾಗೂ ಮೆಂಡಿಸ್ 54 ರನ್ ಗಳ ಹೊರತು ಪಡಿಸಿ ಉಳಿದವರು ಒಂದಂಕಿಗೆ ಔಟ್ ಆದರು. ಅಶ್ವಿನ್  4, ಬೂಮ್ರಾ 3, ಅಕ್ಷರ್ ಪಟೇಲ್ 2, ಜಡೇಜಾ 1 ವಿಕೆಟ್ ಪಡೆದರು. ಇದರೊಂದಿಗೆ ಲಂಕಾ ವಿರುದ್ಧ ಏಕದಿನ, ಟಿ-20, ಟೆಸ್ಟ್ ಸರಣಿ ಎಲ್ಲವನ್ನೂ ರೋಹಿತ್ ಶರ್ಮಾ ಬಳಗ ಗೆದ್ದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!