ಪೂರಾನ್ ಪಡೆಗೆ 266 ರನ್ ಟಾರ್ಗೆಟ್

220

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 80 ಹಾಗೂ ರಿಷಬ್ ಪಂಥ್ 56 ರನ್ ಗಳಿಸಿ ಭರ್ಜರಿ ಆಟವಾಡಿದರು.

ನಾಯಕ ರೋಹಿತ್ ಶರ್ಮಾ 13, ಧವನ್ 10, ಕೊಹ್ಲಿ 0ಗೆ ಔಟ್ ಆಗುವ ಮೂಲಕ ಮತ್ತೆ ಫೇಲ್ ಆದರು. ಸೂರ್ಯಕುಮಾರ್ ಯಾದವ್ 6, ಸುಂದರ್ 33, ದೀಪಕ್ ಚಹಾರ್ 38, ಕುಲದೀಪ್ ಯಾದವ್ 5, ಸಿರಾಜ್ 4 ರನ್ ಗಳಿಸಿ ಔಟ್ ಆದರು. ಪ್ರಸಿದ್ಧ ಕೃಷ್ಣ 0 ರನ್ ನಾಟೌಟ್ ಉಳಿದರು.

ಇದರೊಂದಿಗೆ ವೆಸ್ಟ್ ಇಂಡೀಸ್ ಗೆ 266 ರನ್ ಗಳ ಟಾರ್ಗೆಟ್ ನೀಡಲಾಗಿದೆ. ಇಂಡಿಸ್ ಪರ ಹೋಲ್ಡರ್ 4, ಜೋಶಪ್ 2, ಹೇಡನ್ 2 ವಿಕೆಟ್ ಪಡೆದು ಮಿಂಚಿದರು. ಅಲೆನ್ ಹಾಗೂ ಸ್ಮಿತ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!