‘ಕಿವಿ’ ಹಿಂಡಿದ ಭಾರತ

335

ಆಕಿಲೇಡ್: ಇಲ್ಲಿನ ಈಡನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಶ್ರೇಯಸ ಅಯ್ಯರ ಹಾಗೂ ಮನೀಶ ಪಾಂಡೆಯ ಜೋಡಿಯು ಭಾರತವನ್ನ ಗೆಲುವಿನ ದಡ ಸೇರಿಸಿದೆ. 19 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ನೀಡಿದ್ದ ಬಿಗ್ ಸ್ಕೋರ್ ಕಂಪ್ಲೀಟ್ ಮಾಡಿ ಜಯ ಸಾಧಿಸಿದೆ.

ಶ್ರೇಯಸ ಅಯ್ಯರ ಕೇವಲ 29 ಬೌಲ್ ಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ ಮೂಲಕ 58 ರನ್ ಗಳಿಸಿದ್ದಾರೆ. ಮನೀಶ ಪಾಂಡೆ 12 ಬೌಲ್ ಗಳಲ್ಲಿ 1 ಸಿಕ್ಸ್ ಸೇರಿದಂತೆ 14 ರನ್ ಗಳಿಸಿ ಈ ಜೋಡಿ ನಾಟೌಟ್ ಆಗಿ ಉಳಿಯಿತು. ಆರಂಭಿಕ ಆಟಗಾರ ರೋಹಿತ ಶರ್ಮಾ 7 ರನ್ ಬಾರಿಸಿ ಫೇಲ್ ಆದ. ಕೆ.ಎಲ್ ರಾಹುಲ ಭರ್ಜರಿಯಾಗಿ ಆಡಿ 27 ಬೌಲ್ ಗಳಲ್ಲಿ 56 ರನ್ ಗಳಿಸಿದ್ರು. ಕ್ಯಾಪ್ಟನ್ 32 ಬೌಲ್ ಗಳಲ್ಲಿ 45 ರನ್ ಗಳಿಸಿ ಔಟ್ ಆದ್ರು.

ನ್ಯೂಜಿಲೆಂಡ್ ಪರ ಸೌದಿ 2, ಟಿಕ್ನರ್ 1 ಹಾಗೂ ಮಿಚಲ್ 1 ವಿಕೆಟ್ ಪಡೆದುಕೊಂಡ್ರು. ಇತ್ತ ನ್ಯೂಜಿಲೆಂಡ್ ಬ್ಯಾಟಿಂಗ್ ಲೈನಪ್ ನೋಡಿದ್ರೆ, ಮುನ್ರೋ 59 ರನ್, ಕ್ಯಾಪ್ಟನ್ ಕೇನ್ ಮಿಲಿಯಮ್ಸನ್ 51, ರಾಸ್ ಟೈಲರ್ 54 ರನ್ ಗಳಿಸಿ ಮಿಂಚಿದ್ರು. ಇವರೆಲ್ಲ ಭರ್ಜರಿ ಆಟದಿಂದ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಟೀಂ ಇಂಡಿಯಾ 204 ರನ್ ಗಳ ಬಿಗ್ ಟಾರ್ಗೆಟ್ ನೀಡಿದ್ರು.

ಟೀಂ ಇಂಡಿಯಾ ಪರ ಜಸ್ಪ್ರಿತ್ ಬೂಮ್ರಾ, ಠಾಕೂರ, ಚಾಹಲ್, ದುಬೆ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದ್ರು. 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. 2ನೇ ಟಿ-20 ಪಂದ್ಯ ಜನವರಿ 26ರಂದು ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!