ಸೋಲಿನ ಭೀತಿಯಲ್ಲಿ ವೆಸ್ಟ್ ಇಂಡೀಸ್

346

ಕಿಂಗ್ ಸ್ಟನ್: ಇಂಡಿಯನ್ ಬೌಲರ್ ಗಳ ಹೊಡೆತಕ್ಕೆ ಕೆರಿಬಿಯನ್ ಬ್ಯಾಟ್ಸ್ ಮನ್ ಗಳು ಕಂಗಾಲಾಗಿದ್ದಾರೆ. ಹೀಗಾಗಿ ಕ್ರಿಸ್ ನಲ್ಲಿ ನಿಲ್ಲಲು ಆಗದೆ ಪೆವಿಲಿಯನ್ ಹಾದಿ ತುಳಿಯುತ್ತಿದ್ದು, ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನ ಕ್ಲೀನ್ ಸ್ವಿಪ್ ಮಾಡಿಕೊಳ್ಳುವ ಹಂತದಲ್ಲಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 117 ರನ್ ಗಳಿಗೆ ವೆಸ್ಟ್ ಇಂಡೀಸ್ ಆಲೌಟ್ ಆಗಿದೆ. ಬಳಿಕ ಸೆಕೆಂಡ್ ಇನ್ನಿಂಗ್ಸ್ ಆಡಿದ ಭಾರತ ಅಜಿಂಕೆ ರಹಾನೆ ಮತ್ತು ಹನುಮ ವಿಹಾರಿಯ ಭರ್ಜರಿ ಅರ್ಧ ಶತಕದ ನೆರವಿನಿಂದ 168 ರನ್ ಗಳಿಗೆ  4 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ 478 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.

Image result for india vs west indies 2nd test

ಬಿಗ್ ಸ್ಕೋರ್ ಬೆನ್ನು ಹತ್ತಿರುವ ವೆಸ್ಟ್ ಇಂಡೀಸ್ ಮೂರನೇ ದಿನದಾಟದ ಅಂತ್ಯಕ್ಕೆ 45ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವೆಸ್ಟ್ ಇಂಡೀಸ್ ಗೆ ಎರಡು ದಿನಗಳ ದೊಡ್ಡ ಅವಕಾಶವಿದೆ. ಆದ್ರೆ, ಭಾರತದ ಕರಾರುವಕ್ಕಾದ ಬೌಲಿಂಗ್ ಮುಂದೆ ದೈತ್ಯ ಬಾಟ್ಸ್ ಮನ್ ಗಳು ನಿಲ್ಲುವುದು ಡೌಟ್. ಹೀಗಾಗಿ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನ ಭಾರತ ಕ್ಲೀನ್ ಸ್ವಿಪ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಮೂರನೇ ದಿನದಾಟದ ಅಂತ್ಯದೊಳಗೆ ಇಶಾಂತ ಶರ್ಮಾ ಹಾಗೂ ಮೊಹ್ಮದ ಶಮಿ ತಲಾ 4 ಓವರ್ ಹಾಕಿದ್ದು ಇಬ್ಬರು ಒಂದೊಂದು ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿಯಾಗಿ 6 ವಿಕೆಟ್ ಪಡೆದಿದ್ದ ಬೂಮ್ರಾ 5 ಓವರ್ ಗೆ 15 ರನ್ ನೀಡಿದ್ದಾನೆ.




Leave a Reply

Your email address will not be published. Required fields are marked *

error: Content is protected !!