ಅಮೆರಿಕಾದಿಂದ ಭಾರತೀಯ ನೌಕರರನ್ನ ಹೊರ ದಬ್ಬಲು ದೊಡ್ಡಣ್ಣ ಕೊಟ್ಟ ಡೆಡ್ ಲೈನ್..!

520

ನವದೆಹಲಿ: ಪ್ರಧಾನಿ ಮೋದಿಗೆ ಅತ್ಯಂತ ಆತ್ಮೀಯ ಗೆಳೆಯ ಎನಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ ಹೆಚ್-1ಬಿ ವೀಸಾ ಮೂಲಕ ಅಮೆರಿಕಗೆ ಹೋದ ನೌಕರರನ್ನ ಹೊರದಬ್ಬಲು ರೆಡಿಯಾಗಿದೆ.

ಆರ್ಥಿಕವಾಗಿ ಸಮಸ್ಯೆ ಎದುರಿಸ್ತಿರುವ ವಿಶ್ವದ ದೊಡ್ಡಣ್ಣ, ಹೆಚ್-1ಬಿ ವೀಸಾ ಮೂಲಕ ನೌಕರಿ ಪಡೆದುಕೊಂಡಿರುವ ಭಾರತೀಯರನ್ನ ಮುಂದಿನ 60 ದಿನಗಳಲ್ಲಿ ವಾಪಸ್ ಕಳೆಸಲು ನಿರ್ಧರಿಸಿದೆ. ಈ ಮೂಲಕ ಭಾರತೀಯರಿಗೆ ಟ್ರಂಪ್ ಬಹುದೊಡ್ಡ ಶಾಕ್ ನೀಡಿದ್ದಾನೆ. ಯುಎಸ್ಎ ನಲ್ಲಿ ಮಾರ್ಚ್ ನಿಂದ ಶೇಕಡ 300ರಷ್ಟು ನಿರುದ್ಯೋಗವಿದ್ದು, 6.6 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಮಾಹಿತಿ ಪ್ರಕಾರ 3 ಲಕ್ಷದ 60 ಸಾವಿರ ಜನರಿಗೆ ಸೋಂಕು ತಗುಲಿದ್ದು, 11 ಸಾವಿರ ಜನರು ಸಾವನ್ನಪ್ಪಿದ್ದಾರೆ. ಇದ್ರಿಂದಾಗಿ ಆರ್ಥಿಕವಾಗಿಯೂ ಸಾಕಷ್ಟು ಸಮಸ್ಯೆ ಎದುರಿಸ್ತಿರುವ ಅಮೆರಿಕ, 60 ದಿನಗಳಲ್ಲಿ ಹೆಚ್-1ಬಿ ವೀಸಾ ಪಡೆದು ಹೋದವರನ್ನ ಹೊರ ಹಾಕಲು ನಿರ್ಧರಿಸಿದೆ. ಈಗಾಗ್ಲೇ ಅಮೆರಿಕನ್ಸ್ ಗೆ ತಾತ್ಕಾಲಿಕ ರಜೆ ಘೋಷಣೆ ಮಾಡಲಾಗಿದೆ. ಆದ್ರೆ, ಭಾರತೀಯರು ಮಾತ್ರ ಅಲ್ಲಿ 40 ಗಂಟೆಗಳ ಲೆಕ್ಕದಲ್ಲಿ ಕೆಲಸ ಮಾಡಬೇಕಾಗಿದೆ.

ಇದಕ್ಕೆ ಇನ್ನೊಂದು ಉದಾಹರಣೆ ಅಂದ್ರೆ, ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ಪ್ರಕಾರ, 2015ರಲ್ಲಿ ನಿರುದ್ಯೋಗ ಶೇಕಡ 6ರಷ್ಟು ಇತ್ತು. 2019ರಲ್ಲಿ 21ಕ್ಕೆ ಏರಿಕೆಯಾಗಿದೆ. ಹಚ್-1ಬಿ ವೀಸಾ ಸ್ಥಗತಿಗೊಳಿಸಲು ಪ್ಲಾನ್ ಮಾಡಲಾಗಿದೆ. ಇದ್ರಿಂದಾಗಿ ಹಸಿರು ಕಾರ್ಡ್ ಭಾರತೀಯರಿಗೆ ಕಂಟಕ ಎದುರಾಗಿದೆ. ಥಿಂಕ್ ಟ್ಯಾಂಕ್ ಕ್ಯಾಟೊ ಇನ್ಸ್ ಟ್ಯೂಟ್ ಅಂದಾಜಿನ ಪ್ರಕಾರ 2 ಲಕ್ಷ ಜನ ಹಸಿರು ಕಾರ್ಡ್ ಸಮಸ್ಯೆಯಿಂದ ಬೀದಿಗೆ ಬರಬಹುದು ಎಂದು ತಿಳಿಸಿದೆ.

ಅಮೆರಿಕದಲ್ಲಿರುವ ಭಾರತೀಯ ಡಾಕ್ಟರ್ಸ್, ನರ್ಸ್ ಗಳು, ಸಾಫ್ಟವೇರ್ ಇಂಜಿನಿಯರ್ ಗಳು, ವಲಸೆ ಕೆಲಸಗಾರರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಿಗಳು ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ. ಆದ್ರೆ, ಭಾರತೀಯ ಸೇರಿದಂತೆ ಅನೇಕ ದೇಶಗಳು ವಿಮಾನಯಾನ ನಿರ್ಬಂಧ ಹೇರಿರುವ ಟೈಂನಲ್ಲಿ 60 ದಿನಗಳಲ್ಲಿ ಇವರನ್ನ ವಾಪಸ್ ಭಾರತಕ್ಕೆ ಕಳಿಸುವುದು ಸ್ವಲ್ಪ ಲೇಟ್ ಆಗಲಿದೆ ಎನ್ನಲಾಗ್ತಿದೆ. ಹೀಗಾಗಿ ಹೊಸದಾಗಿ ಹೆಚ್-1ಬಿ ವೀಸಾ ನೀಡುವುದಿಲ್ಲ. ನವೀಕರಿಸುವುದಿಲ್ಲ. ವೀಸಾ ಅವಧಿ ಮುಗಿದವರು ವಾಪಸ್ ತವರಿಗೆ ಹೋಗಲು ಸಿದ್ಧರಾಗಬೇಕು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!