49 ವರ್ಷಗಳ ಬಳಿಕ ಸೆಮಿಗೆ ಲಗ್ಗೆ ಇಟ್ಟ ಭಾರತ ಹಾಕಿ ತಂಡ

233

ಪ್ರಜಾಸ್ತ್ರ ಕ್ರೀಡಾಸುದ್ದಿ

ಟೊಕಿಯೋ: ಭಾರತದ ಹಾಕಿ ತಂಡ ಬ್ರಿಟನ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ 49 ವರ್ಷಗಳ ಬಳಿಕ ಬ್ರಿಟನ್ ಪಡೆಯನ್ನ ಸೋಲಿಸಿದೆ. ಟೀಂ ಇಂಡಿಯಾಗೆ ಎಲ್ಲರಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ಬ್ರಿಟನ್ ವಿರುದ್ಧ ಮನ್ ಪ್ರೀತ್ ಸಿಂಗ್ ಪಡೆ ಭರ್ಜರಿ 3-1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಪಂದ್ಯದ 7ನೇ ನಿಮಿಷದಲ್ಲಿ ದಿಲ್ ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಬ್ರಿಟನ್ ಗೆ ಶಾಕ್ ನೀಡಿದ್ರು. ಈಗ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸುವ ಮೂಲಕ ಚಿನ್ನದ ಪದಕದ ಭರವಸೆ ಮೂಡಿಸಿದೆ. 1980ರ ಬಳಿಕ ಮನ್ ಪ್ರೀತ್ ಸಿಂಗ್ ಪಡೆ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಇದು ಭಾರತೀಯರಲ್ಲಿ ಖುಷಿ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!