ಏಕದಿನ ಸರಣಿ ಸೋತ ಮಿಥಾಲಿ ಪಡೆ

356

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಮಹಿಳಾ ತಂಡ ಸೌಥ್ ಆಫ್ರಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಸರಣಿಯನ್ನ ಸೋತಿದೆ. ಸೌಥ್ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಮಿಥಾಲಿ ರಾಜ್ ಪಡೆ 4 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತ್ತು.

ಪೂನಂ ರೌತ್ ಭರ್ಜರಿ (104) ಶತಕದಾಟವಾಡಿದ್ದರು. ಹರಮ್ ಪ್ರೀತ್ ಕೌರ್ 54, ಕ್ಯಾಪ್ಟನ್ ಮಿಥಾಲಿ 45, ಪ್ರಿಯಾ ಪೂನಿಯಾ 32 ರನ್ ಗಳ ಆಟದಿಂದಾಗಿ 266 ರನ್ ಗಳ ಒಳ್ಳೆಯ ಸ್ಕೋರ್ ಮಾಡಿತ್ತು. ಆದ್ರೂ ಸೌಥ್ ಆಫ್ರಿಕಾ ಆಟಗಾರರ ಮುಂದೆ ಸೋಲು ಅನುಭವಿಸಿದೆ.

ಸೌಥ್ ಆಫ್ರೀಕಾ ಪರ ಲೀ 69, ಕ್ಯಾಪ್ಟನ್ ಲೌರಾ 53, ಲಾರಾ ಗುಡ್ ಆಲ್ 59, ಮೈಗಾನ್ ಪ್ರೀಝಾ 61 ರನ್ ಗಳ ಭರ್ಜರಿ ಆಟದಿಂದಾಗಿ48.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 269 ರನ್ ಬಾರಿಸಿ ಗೆಲುವಿನ ನಗೆ ಬೀರಿದರು. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 3-1 ಗೆಲುವಿನಿಂದ 1 ಪಂದ್ಯ ಇರುವ ಮೊದ್ಲೇ ಸರಣಿ ವಶ ಪಡಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!