ಶತಕದಾಟಿದ ಸಾವು.. ದ್ವಿಶತಕ ಬಾರಿಸಿದ ಸೋಂಕು

340

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, 204 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,734 ಆಗಿದೆ. ಇಂದು 348 ಜನ ಗುಣಮುಖರಾಗಿದ್ದು, ಇದುವರೆಗೂ 4,804 ಜನರು ಚೇತರಿಸಿಕೊಂಡಿದ್ದಾರೆ. 2,824 ಪ್ರಕರಣಗಳು ಚಾಲ್ತಿಯಲ್ಲಿವೆ.

ಇನ್ನು ಇಂದು 8 ಜನರು ಕೋವಿಡ್ 19ಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ 5, ಶಿವಮೊಗ್ಗ 1, ಬೀದರ 1, ಬಳ್ಳಾರಿಯಲ್ಲಿ ಒಬ್ಬರು ಕೋವಿಡ್ 19ಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 72 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ..

ಬೆಂಗಳೂರು ನಗರ 55, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ 12, ದಕ್ಷಿಣ ಕನ್ನಡ 8, ಧಾರವಾಡ 8, ಮಂಡ್ಯ 7, ಹಾಸನ 5, ಉಡುಪಿ 4, ಬಾಗಲಕೋಟೆ 4, ಶಿವಮೊಗ್ಗ 4, ದಾವಣಗೆರೆ 3, ದಕ್ಷಿಣ ಕನ್ನಡ 3, ಚಿಕ್ಕಬಳ್ಳಾಪುರ 3, ರಾಯಚೂರು 1, ಮೈಸೂರು 1 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1 ಸೋಂಕು ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!