ಗುಜರಾತ್ ಸಿಎಂಗೆ ಇದೆಂಥಾ ಅವಮಾನ!

201

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಜನರತ್ತ ಕೈ ಬೀಸಿ ಕಾರು ಏರಬೇಕು ಅಷ್ಟರಲ್ಲಿ ಕಾರು ಮುಂದೆ ಚಲಿಸುತ್ತೆ. ಹೀಗಾಗಿ ಅವರು ಕಾರನ್ನು ಹಿಂಬಾಲಿಸುತ್ತಾ ಸ್ವಲ್ಪ ದೂರ ಓಡುತ್ತಾರೆ. ಅಂತಹದೊಂದು ವಿಡಿಯೋ ಟ್ವೀಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಈ ವೇಳೆ ಅವರು ಮುಖ್ಯಮಂತ್ರಿಯನ್ನು ಈ ರೀತಿಯಾಗಿ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು, ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡದೆ, ಗುಜರಾತಿಗರಿಗೆ ಅವಮಾನ ಮಾಡಲಾಗಿದೆ. ಒಬ್ಬ ಮುಖ್ಯಮಂತ್ರಿಯನ್ನೇ ಹೀಗೆ ನಡೆಸಿಕೊಂಡರೆ ಸಾಮಾನ್ಯ ಜನರ ಕಥೆ ಏನು ಅಂತಾ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇಷ್ಟೊಂದು ಅವಮಾನ ಮಾಡಿದರೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೈಕಮಾಂಡ್ ಗೆ ಎಷ್ಟೊಂದು ಮಾರಿಕೊಂಡಿದ್ದಾರೆ ಎಂದೂ ಅವರ ವಿರುದ್ಧವೂ ವಾಗ್ದಾಳಿ ನಡೆಸಲಾಗಿದೆ.




Leave a Reply

Your email address will not be published. Required fields are marked *

error: Content is protected !!