‘ಯಶೋದೆ’ಯಾಗಿ ಕನ್ನಡಕ್ಕೆ ಸಮಂತಾ

154

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಸಮಂತಾ ಲೀಡ್ ರೋಲ್ ನಲ್ಲಿ ಅಭಿನಯಿಸಿರುವ ಯಶೋದಾ ಚಿತ್ರದ ಕನ್ನಡದ ಟ್ರೇಲರ್ ನಾಳೆ ರಿಲೀಸ್ ಆಗಲಿದೆ. ನಟ ರಕ್ಷಿತ್ ಶೆಟ್ಟಿ ಅಕ್ಟೋಬರ್ 27ರ ಸಂಜೆ 5.30ಕ್ಕೆ ರಿಲೀಸ್ ಮಾಡಲಿದ್ದಾರೆ. ಈ ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ.

ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನವೆಂಬರ್ 11ರಂದು ಚಿತ್ರ ರಿಲೀಸ್ ಆಗುತ್ತಿದೆ. ನಟಿ ಸಮಂತಾಳ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಹರಿ ಹಾಗೂ ಹರೀಶ್ ಜಂಟಿಯಾಗಿ ನಿರ್ದೇಶನ ಮಾಡಿರುವ ಯಶೋದಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.

ಶಿವಲೆಂಕ ಕೃಷ್ಣಪ್ರಸಾದ್ ನಿರ್ಮಾಣ ಮಾಡಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ಉನ್ನಿ ಮುಕುಂದನ್, ಮುರುಳಿ ಶರ್ಮಾ, ಸಂಪತ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!