ಚಾಯ್-ಸ್ಯಾಮ್ ದೂರ.. ದೂರ..

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹೈದ್ರಾಬಾದ್: ಕಳೆದ ಹಲವು ತಿಂಗಳಿನಿಂದ ಟಾಲಿವುಡ್ ಸ್ಟಾರ್ ಕಪಲ್ ನಾಗ್ ಚೈತನ್ಯ ಹಾಗೂ ಸಮಂತಾ ನಡುವೆ ಮೂಡಿದ ಬಿರುಕು ಭರ್ಜರಿ ಸುದ್ದಿ ಮಾಡಿದೆ. ಅವರ ವೈವಾಹಿಕ ಜೀವನದಲ್ಲಿ ಎದ್ದ ಬಿರುಗಾಳಿ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಇದರ ನಡುವೆ ಈ ಜೋಡಿ ಬೇರೆ ಬೇರೆ ಆಗುವುದಕ್ಕೆ ನಿರ್ಧರಿಸಿರುವುದು ನಿಜವಾಗಿದೆ.

ಇಬ್ಬರು ಇನ್ಸ್ಟಾಗ್ರಾಮ್ ದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಾವಿಬ್ಬರು ಪ್ರತ್ಯೇಕವಾಗಲು ನಿರ್ಧರಿಸಿದ್ದು, ಆದರೆ, ಮುಂದಿನ ದಿನಗಳಲ್ಲಿಯೂ ನಮ್ಮ ಸ್ನೇಹ ಮುಂದುವರೆಯಲಿದೆ. ಇಲ್ಲಿಯವರೆಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!