ರಸ್ತೆಯಲ್ಲೇ ಮಗುವಿಗೆ ಜನ್ಮ.. ಬಳಿಕ 150 ಕಿ.ಮೀ ಪಯಣ

365

ಮುಂಬೈ: ಕರೋನಾ ಲಾಕ್ ಡೌನ್ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಇದು ಯಾರ ಬದುಕಿಗೆ ನಮ್ಮದಿ ನೀಡಿಲ್ಲ. ಹೀಗಾಗಿ ಬಡ ಕೂಲಿ ಕಾರ್ಮಿಕರ ಪಾಡು ಸಾವಿರ ಸಾವಿರ ಕಥೆಗಳನ್ನ ಹೇಳುತ್ತಿವೆ. ಬಸ್, ರೈಲಿನ ಮೂಲಕ ಅವರವರ ಊರಿಗೆ ಹೋಗಲು ಸರ್ಕಾರ ಅವಕಾಶ ಮಾಡಿದೆ. ಆದ್ರೆ, ಕೆಲವರು ನಡೆದುಕೊಂಡು ಹೋಗ್ತಿರುವುದು ಕಂಡು ಬಂದಿದೆ.

ಹೀಗೆ ಮಹಾರಾಷ್ಟ್ರದ ನಾಸಿಕ್ ನಗರದಿಂದ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಗೆ ನಡೆದುಕೊಂಡು ಹೋಗ್ತಿದ್ದ ಗರ್ಭಿಣಿಯೊಬ್ಬರು ಮಾರ್ಗಮಧ್ಯ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಒಂದಿಷ್ಟು ವಿಶ್ರಾಂತಿ ಪಡೆದ ಮಹಿಳೆ, 150 ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದೇವೆ ಎಂದು ಆಕೆ ಪತಿ ಹೇಳಿದ್ದಾರೆ. ಈ ವಿಷಯ ತಿಳಿದ ಸಾತ್ನಾ ಜಿಲ್ಲೆಯ ಆಡಳಿತ ಮಂಡಳಿ, ಕೂಡಲೇ ಬಸ್ಸಿನ ವ್ಯವಸ್ಥೆ ಮಾಡಿ ಅವರನ್ನ ಆಸ್ಪತ್ರೆಗೆ ದಾಖಲಿಸಿದೆ. ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!