ಆರ್ ಸಿಬಿ ಹೊಸ ನಾಯಕ ಇವರೇನಾ?

374

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಪಿಎಲ್ 2022ರ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 26ರಿಂದ ಪಂದ್ಯಗಳು ಶುರುವಾಗಲಿವೆ. ಆರ್ ಸಿಬಿ ನಾಯಕತ್ವದಿಂದ ಕೊಹ್ಲಿ ಹಿಂದೆ ಸೇರಿದ ಮೇಲೆ ಯಾರು ನೂತನ ಸಾರಥಿ ಅನ್ನೋ ಪ್ರಶ್ನೆ ಮೂಡಿದೆ. ಅಲ್ದೇ, ಅಭಿಮಾನಿಗಳಲ್ಲೂ ಭಾರೀ ಕುತೂಹಲ ಮೂಡಿಸಿದೆ.

ಕೊಹ್ಲಿ ನಂತರ ಆರ್ ಸಿಬಿ ಕ್ಯಾಪ್ಟನ್ ರೇಸಿನಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್, ದಕ್ಷಿಣ ಆಫ್ರಿಕಾದ ಫ್ಲಾಪ್ ಡು ಪ್ಲಸಿ ಹಾಗೂ ಭಾರತ ದಿನೇಶ್ ಕಾರ್ತಿಕ್ ಹೆಸರು ಚಾಲ್ತಿಯಲ್ಲಿದೆ. ಆದರೆ, ಮದುವೆ ಕಾರಣಕ್ಕೆ ಮ್ಯಾಕ್ಸ್ ವೆಲ್ ಆರಂಭದ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಮ್ಯಾಕ್ಸಿ ನಾಯಕನಾಗುವುದು ಡೌಟ್.

ಆರ್ ಸಿಬಿ ಫ್ರಾಂಚೈಸಿ ಮುಂದೆ ಇರುವುದು ದಿನೇಶ್ ಕಾರ್ತಿಕ್ ಹಾಗೂ ಫ್ಲಾಪ್ ಡು ಪ್ಲಿಸಿ. ಕೆಕೆಆರ್ ಪರ ಭರ್ಜರಿ ಆಟವಾಡಿ ಒಮ್ಮೆ ಚಾಂಪಿಯನ್ಸ್ ಆಗಲು ಕಾರಣರಾದವರು ಕಾರ್ತಿಕ್. ಇನ್ನು ಡುಪ್ಲಸಿ ಸೌಥ್ ಆಫ್ರಿಕಾ ತಂಡವನ್ನು ಮುನ್ನಡೆಸಿದವರು. ಹೀಗಾಗಿ ಇಬ್ಬರಲ್ಲಿ ಒಬ್ಬರಿಗೆ ನಾಯಕತ್ವ ನೀಡಬೇಕಿದೆ. ಕೆಲ ಮೂಲಗಳ ಪ್ರಕಾರ ದಿನೇಶ್ ಕಾರ್ತಿಕ್ ಎನ್ನಲಾಗುತ್ತಿದೆ. ಇನ್ನೊಂದ್ಕಡೆ ಡುಪ್ಲಸಿ ಹೆಸರು ಕೇಳಿ ಬಂದಿದ್ದು, ಮಾರ್ಚ್ 12ರಂದು ಕ್ಯಾಪ್ಟನ್ ಹೆಸರನ್ನು ಘೋಷಣೆ ಮಾಡಲಾಗುತ್ತಿದೆ. ಅಂದೇ ನೂತನ ಜರ್ಸಿ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!