ಅಂಬಾನಿ ಕುಟುಂಬಕ್ಕೆ ಐಟಿ ನೋಟಿಸ್

378

ಮುಂಬೈ: ಭಾರತದ ಅತೀ ಶ್ರೀಮಂತ ಉದ್ಯಮಿಗಳಲ್ಲಿ ಟಾಪ್ ನಲ್ಲಿರುವ ಮುಖೇಶ ಅಂಬಾನಿ ಕುಟುಂಬಕ್ಕೆ ಐಟಿ ನೋಟಿಸ್ ನೀಡಿದೆ. ಮುಖೇಶ ಮತ್ನಿ ನೀತಾ ಅಂಬಾನಿ ಮತ್ತು ಮೂವರು ಮಕ್ಕಳಿಗೆ ಆದಾಯ ತೆರಿಗೆ ಇಲಾಖೆ, 2015ರ ಕಪ್ಪು ಹಣ ನಿಯಂತ್ರಣ ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ.

2011ರಲ್ಲಿ ಜೀನಿವಾದ ಎಚ್ಎಸ್ ಬಿಸಿ ಬ್ಯಾಂಕ್ ನಲ್ಲಿ ಖಾತೆ ತೆಗೆದಿರುವ ಸುಮಾರು 700 ಉದ್ಯಮಿ ಸಂಸ್ಥೆಗಳ ವಿವರ ಸರ್ಕಾರಕ್ಕೆ ಸಿಕ್ಕ ಬಳಿಕ ಐಟಿ ತನಿಖೆ ನಡೆಸಲಾಗಿದೆ. ಇದರಲ್ಲಿ ಅಂಬಾನಿಯ ರಿಲಯನ್ಸ್ ಗ್ರೂಪ್ ಗೆ ಸೇರಿದ 14 ಖಾತೆಗಳು ಇರುವುದು ತಿಳಿದಿದೆ. ಮಾರ್ಚ್ 28ರಂದೇ ನೋಟಿಸ್ ನೀಡಲಾಗಿದೆ ಅನ್ನೋದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಆದ್ರೆ, ರಿಯಲನ್ಸ್ ಕಂಪನಿಯ ವಕ್ತಾರರು ಇದನ್ನ ನಿರಾಕರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!