ಇಡಿ ಚಾರ್ಜ್ ಶೀಟ್ ನಲ್ಲಿ ‘ರಕ್ಕಮ್ಮ’.. ಬಂಧನದ ಭೀತಿ

193

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವಿಕ್ರಾಂತ ರೋಣಾ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಎಕ್ಕ ಸಕ್ಕ ಹಾಡಿನ ಮೂಲಕ ಸಖತ್ ಸೌಂಡ್ ಮಾಡಿದ ಬಿಟೌನ್ ನಟಿ ಜಾಕ್ವೆಲಿನಾಗೆ ಇಡಿ ಸಂಕಷ್ಟ ಶುರುವಾಗಿದೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ನಟಿ ಜಾಕ್ವೆಲಿನಾ ಆರೋಪಿಯಾಗಿದ್ದಾರೆ.

ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿಯನ್ನು ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಈಗ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನಟಿಯ ಹೆಸರು ಇದೆ. ಸುಕೇಶ್ ಚಂದ್ರಶೇಖರ್ ಜೊತೆ ನಟಿ 2017ರಿಂದ ಸಂಪರ್ಕದಲ್ಲಿದ್ದಾರೆ. ಆಕೆಯ ಹೇಳಿಕೆ ಪ್ರಕಾರ, ಸುಕೇಶ್ ಸನ್ ಟಿವಿ ಮಾಲೀಕ ಹಾಗೂ ದಿವಂಗತ ಮಾಜಿ ಸಿಎಂ ಜಯಲಲಿತಾ ಅವರ ಕುಟುಂಬಸ್ಥ ಎಂದು ಹೇಳಿದ್ದಾನೆ ಅನ್ನೋದಾಗಿದೆ.

ನಟಿ ಜಾಕ್ವೆಲಿನಾ ಸಹೋದರಿಗೆ 1 ಲಕ್ಷದ 50 ಸಾವಿರ ಡಾಲರ್ ಲೋನ್ ನೀಡಲಾಗಿದೆ. ಆಸ್ಟ್ರೇಲಿಯಾದಲ್ಲಿರುವ ಸಹೋದರನಿಗೆ 15 ಲಕ್ಷ ರೂಪಾಯಿ ವರ್ಗಾಯಿಸಲಾಗಿದೆ. ಇನ್ನು ಇಡಿ ಈ ಹಿಂದೆ ನಟಿಯ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಇದರಲ್ಲಿ ವಜ್ರದ ಓಲೆ, ನಕ್ಲೆಸ್, ಮಿನಿ ಕೂಪರ್ ಕಾರ್ ಸೇರಿದಂತೆ ಅನೇಕ ವಸ್ತುಳನ್ನು ಜಪ್ತಿ ಮಾಡಲಾಗಿದೆ. ಸಧ್ಯ ನಟಿ ವಿದೇಶದಲ್ಲಿದ್ದು, ಬಂಧನದ ಭೀತಿ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!